ಉಡುಪಿ, ಮೇ 02 (DaijiworldNews/SM): “ನಾವು ಹುಟ್ಟಿರುವುದು ಅಯೋಧ್ಯೆಯ ಸಂಘರ್ಷದ ಭೂಮಿಯಲ್ಲಿ. ನಾವು ಸಂಘರ್ಷದಿಂದಲೇ ಹುಟ್ಟು,ಹುಟ್ಟಿನಿಂದಲೇ ಸಂಘರ್ಷ ಎನ್ನುವಂತಹ ಧ್ಯೇಯ ವಾಕ್ಯದೊಂದಿಗೆ ಹುಟ್ಟಿ,ಆರಂಭಗೊಂಡಂತಹ ಸಂಘಟನೆ.ನಾವು ಯಾವುದೇ ಸಂಘರ್ಷಕ್ಕೂ ಸಿದ್ಧ.ಕಾಂಗ್ರೆಸ್ ಮುಳುಗುವ ಹಡಗು. ಬಜರಂಗದಳ ವನ್ನು ನಿಷೇಧಿಸುವ ಪ್ರಸ್ತಾಪ ಇರುವ ಪ್ರಣಾಳಿಕೆಯನ್ನು ಕಾಂಗ್ರೆಸ್ ತಕ್ಷಣವೇ ಹಿಂಪಡೆಯಬೆಕು ಎಂದು ಬಜರಂಗದಳದ ಪ್ರಾಂತ ಸಂಚಲಾಕ ಸುನಿಲ್ ಕೆ.ಆರ್ ಪತ್ರಿಕಾ ಗೋಷ್ಟಿಯಲ್ಲಿ ಆಗ್ರಹಿಸಿದರು.
“ಎಲ್ಲ ಪಕ್ಷದವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಹಾಗೆಯೇ ಕಾಂಗ್ರೆಸ್ ಕೂಡ ಬಿಡುಗಡೆ ಮಾಡಿದೆ. ಆದರೆ ,ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿ ಬಜರಂಗದಳ ಮತ್ತು ಪಿಎಫ್ಐ ಎಂಬ ಸಂಘಟನೆಯನ್ನು ನಿಷೇಧ ಮಾಡುತ್ತೇನೆ ಎನ್ನುವುದು ದುಃಖದ ಸಂಗತಿ ಮತ್ತು ಬಜರಂಗದಳವನ್ನು ಪಿಎಫ್ಐಗೆ ಹೋಲಿಸುವುದು ಖಂಡನೀಯ” ಎಂದರು.
“ಪಿಎಫ್ಐ ದೇಶದ್ರೋಹಿ ಕೃತ್ಯಗಳನ್ನು ಮಾಡುತ್ತಾ ಬಂದಿದೆ ಮತ್ತು ಭಯೋತ್ಪಾದನೆಯನ್ನುಮಾಡುವ ಉಗ್ರ ಸಂಘಟನೆ.ಆದರೆ, ಬಜರಂಗದಳ ಲವ್ ಜಿಹಾದ್ ನ ವಿರುದ್ಧ ನಿರಂತರ ಹೋರಾಟ ಮಾಡುತ್ತಾ, ಗೋ ರಕ್ಷಣೆಯನ್ನುಮಾಡುತ್ತಿದೆ.ನಿರಂತರವಾಗಿ ರಾಷ್ಟ್ರೀಯ ಪರವಾಗಿ,ಧರ್ಮದ ಪರವಾಗಿ ಕೆಲಸ ಮಾಡುವ ಬಜರಂಗದಳವನ್ನು ನಿಷೇಧ ಮಾಡುತ್ತೇನೆಂದರೆ ಖಂಡನೀಯ.ಕಾಂಗ್ರೆಸ್ ಬಜರಂಗದಳವನ್ನು ನಿಷೇಧ ಮಾಡಿ ನೋಡಲಿ, ಅದಕ್ಕೆ ತಕ್ಕ ಉತ್ತರವನ್ನು ಬಜರಂಗದಳ ನೀಡುತ್ತದೆ” ಎಂದರು.
ಇದೇ ಸಂಧರ್ಭದಲ್ಲಿ ಬಜರಂಗದ ದಳ ಕಾರ್ಯಕರ್ತರು ಕಾಂಗ್ರೆಸ್ ನ ಪ್ರಣಾಳಿಕೆಯನ್ನು ಸುಡುವ ಮೂಲಕ ಆಕ್ರೋಷ ವ್ಯಕ್ತಪಡಿಸಿದರು.