ಮಂಗಳೂರು, ಮೇ 02 (DaijiworldNews/HR): ಸಮಾಜಸೇವೆಗಾಗಿ ಗಣೇಶ್ ಕುಲಾಲ್ ಮಾಣಿಲ ಅವರು ಬೆಂಗಳೂರಿನ ಆಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ಕೊಡಲ್ಪಡುವ 2023ನೇ ಸಾಲಿನ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೇ 25ರಂದು ಬೆಂಗಳೂರು ಜೆ.ಸಿ. ರೋಡ್ನಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗಣೇಶ್ ಕುಲಾಲ್ ಮಾಣಿಲ ಅವರಿಗೆ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ಬಂಟ್ವಾಳ ತಾಲೂಕಿನ ಮಾಣಿಲ ಮುರ್ವ ಮನೆಯ ಶ್ರೀ ನಾರಾಯಣ ಮೂಲ್ಯ ಮತ್ತು ಶ್ರೀಮತಿ ಸುಂದರಿ ದಂಪತಿಗಳ ಮಗನಾಗಿ ಸಮಾಜಮುಖಿ ಸೇವೆ ಮಾಡುತ್ತಿರುವ ಗಣೇಶ್ ಮಾಣಿಲ ಅವರು ಎಂಬಿಎ ವಿದ್ಯಾಭ್ಯಾಸ ಮುಗಿಸಿ ಮಾರ್ಕೆಟಿಂಗ್ ವಿಭಾಗದಲ್ಲಿ ಕಲಿತು ಬೆಹ್ರೈನ್ ನಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಆಗಿ ಕಳೆದ 11 ವರ್ಷಗಳಿಂದ ದುಡಿಯುತ್ತಿದ್ದಾರೆ.