ಉಡುಪಿ, ಮೇ 1 (DaijiworldNews/MS): ಕಾಂಗ್ರೆಸ್ ಇತಿಹಾಸದಲ್ಲೇ ರಾಜಕೀಯದ ಗಂಧಗಾಳಿ ಇಲ್ಲದ ವ್ಯಕ್ತಿಯನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ಉಡುಪಿ ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕರ್ನಾಟಕದಲ್ಲಿ ಬಹುಮತದಿಂದ ಗೆದ್ದಿರುವ ಪಕ್ಷ ಎಂದರೆ ಅದು ಬಿಜೆಪಿ. ನನಗೆ ನೂರಕ್ಕೆ ನೂರು ವಿಶ್ವಾಸವಿದೆ ಯಶ್ಪಾಲ್ ಸುವರ್ಣ ಅವರು ಈ ಬಾರಿ ಗೆಲ್ಲುವುದು ಖಚಿತ. ಕಾಂಗ್ರೆಸ್ ಕಾರ್ಯಕರ್ತರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗದಿದ್ದರೂ ಯಶ್ಪಾಲ್ ಸುವರ್ಣ ಪರ ಕೆಲಸ ಮಾಡುತ್ತಿದ್ದಾರೆ ಎಂದರು.
ಇನ್ನು ಬಿಜೆಪಿ ಸೇರಿದ ಪ್ರಮೋದ್ ಮಧ್ಚರಾಜ್ ಈಗ ಗಾಳ ಹಾಕುತ್ತಿದ್ದಾರೆ ಡಿಕೆಶಿ ಹೇಳಿಕೆಗೆ ಪ್ರಮೋದ್ ಮದ್ವರಾಜ್ ಪ್ರತಿಕ್ರಿಯೆ ನೀಡಿ ಈಗ ನಾನು ಗಾಳ ಹಾಕುತ್ತಾ ಇದ್ದೆನಾ? ಮೂಡಿಗೆರೆಯಿಂದ ಅಫ್ಜಲ್ರದವರೆಗೆ ಬಿಜೆಪಿ ನನ್ನನ್ನು ಪ್ರವಾಸಕ್ಕೆ ಕಳುಹಿಸಿದೆ. ನನಗೆ ಗಾಳ ಹಾಕಲು ಎಲ್ಲಿ ಸಮಯ ಇದೆ? ಡಿಕೆ ಶಿವಕುಮಾರ್ 1979 ರಿಂದಲೂ ನನಗೆ ಗೊತ್ತು ನನ್ನ ತಾಯಿ ಮಂತ್ರಿಯಾಗಿದ್ದಾಗ ನಮ್ಮ ಮನೆಗೆ ಯಾವಾಗಲೂ ಬರುತ್ತಿದ್ದರು. ಆಗ ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು? ಮೊನ್ನೆ ತನ್ನ ಅಧಿಕೃತ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಅಧಿಕೃತವಾಗಿ 1400 ಕೋಟಿ ಘೋಷಣೆ ಮಾಡಿದ್ದಾರೆ ಅನಧಿಕೃತ ಇನ್ನು ಎಷ್ಟಿದೆಯೋ ಗೊತ್ತಿಲ್ಲ. ಎಲ್ಲಿದ್ದ ಡಿಕೆಶಿ ಎಲ್ಲಿಗೆ ಬಂದಿದ್ದಾರೆ ಎಂಬ ನಗ್ನ ಸತ್ಯ ರಾಜ್ಯದ 6.5 ಕೋಟಿ ಜನತೆಗೆ ಗೊತ್ತಿದೆ .ಲೂಟಿ ಮಾಡಿ ಸಾಮ್ರಾಜ್ಯ ಕಟ್ಟಿ ಹೆಮ್ಮೆಪಡುವುದಕ್ಕಿಂತ ಪ್ರಾಮಾಣಿಕವಾಗಿ ಗಾಳ ಹಾಕಿ ಮೀನು ಹಿಡಿಯುವುದು ಸರ್ವಶ್ರೇಷ್ಠ ಕೆಲಸ ಎಂದು ತಿರುಗೇಟನ್ನು ನೀಡಿದರು.
ಮೀನುಗಾರರ ಜೊತೆ ರಾಹುಲ್ ಗಾಂಧಿ ಸಂವಾದ ವಿಚಾರವಾಗಿ ಮಾತನಾಡಿ ರಾಹುಲ್ ಗಾಂಧಿ ಈವರೆಗೆ ಮೂರು ಬಾರಿ ಸಂವಾದ ಮಾಡಿದ್ದಾರೆ. ಎರಡು ಸಂವಾದ ಗಳಿಗೆ ನಾನೇ ಟ್ರಾನ್ಸ್ ಲೇಟರ್ ಆಗಿ ಕೆಲಸ ಮಾಡಿದ್ದೇನೆ. ಈ ಬಾರಿ ಬಿಕೆ ಹರಿಪ್ರಸಾದ್ ಯಾವ ರೀತಿ ಭಾಷಾಂತರ ಮಾಡಿದ್ದಾರೆ ಎಲ್ಲರಿಗೂ ಗೊತ್ತು ರಾಹುಲ್ ಗಾಂಧಿ ಬಲೆಯಲ್ಲಿ ಮೀನು ಸಿಕ್ಕಿಲ್ಲ ಅಂದರೆ ಬಿಕೆ ಹರಿಪ್ರಸಾದ್ ಭರಪೂರ ಮೀನು ಸಿಕ್ಕಿದೆ ಅಂತಿದ್ರು. ಸಂವಾದ ಅವರಿಗೆ ಟೈಮ್ ಪಾಸ್ ಗೆ ಇರುವ ಒಂದು ವ್ಯವಸ್ಥೆ. ರಾಹುಲ್ ಗಾಂಧಿ ಸಂವಾದಕ್ಕೆ ಹೆಚ್ಚಿನ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದರು.