ಉಡುಪಿ, ಏ 01 (DaijiworldNews/HR): ಎಲ್ಲಾ ಧರ್ಮದವರನ್ನೂ ಜೊತೆಯಾಗಿ ಕೊಂಡೊಯ್ಯಬೇಕು. ಗ್ಯಾರಂಟಿ ಕಾರ್ಡ್ ನ ವಿಷಯವನ್ನು ಮನೆಯ ಮಹಿಳೆಯರ ಬಳಿಯೇ ಮಾತನಾಡಬೇಕು ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅಭಿಪ್ರಾಯಪಟ್ಚರು.
ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ಕಲ್ಮಾಡಿ ವಾರ್ಡ್ ನಲ್ಲಿ ಕಾಂಗ್ರೆಸ್ ಮುಖಂಡರಾದ ಡಿಯೊನ್ ನೇತೃತ್ವದಲ್ಲಿಂದು ಮನೆ -ಮನೆ ಭೇಟಿ ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಸಭೆಯಲ್ಲಿ ಹಿರಿಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.