ಉಡುಪಿ, ಏ 01 (DaijiworldNews/HR): ವಿದ್ಯಾರ್ಥಿ ಜೀವನದಲ್ಲೇ ಭೂ ನ್ಯಾಯ ಮಂಡಳಿ ಸದಸ್ಯರಾಗಿ ಜನರಿಗೆ ಭೂಮಿಯ ಹಕ್ಕನ್ನು ಕೊಟ್ಟ ಏಕೈಕ ರಾಜಕಾರಣಿ ಇದ್ರೆ ಅದು ವಿನಯ ಕುಮಾರ್ ಸೊರಕೆ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಪಡುಬಿದ್ರಿಯ ಕಂಚಿನಡ್ಕದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜ ಸೇವಕರಂದರೆ ಸಮಾಜದ ಜೊತೆ ಇರಬೇಕು. ತನ್ನ ಸಮಾಜ ಸೇವೆಯ ಕಾರ್ಯದಲ್ಲಿ ವಿನಯತೆಯಿಂದ ವಿನಯವಂತರಾಗಿ ಕಳೆದ ಚುನಾವಣೆಯಲ್ಲಿ 5 ವರ್ಷಗಳ ಕಾಲ ಸೋಲಿಸಿ ರಜೆ ಕೊಟ್ಟರೂ ನಿಮ್ಮ ಜೊತೆ ಇದ್ದು ನಿಮ್ಮ ಸಮಸ್ಯ ಗೆ ಹೋರಾಟಕ್ಕೆ ಧ್ವನಿಯಾದವರು ವಿನಯ ಕುಮಾರ್ ಸೊರಕೆಯವರು ಮಾತ್ರ. ಮತದಾನ ಮಾಡುವ ಸಂದರ್ಭ ಮತದಾರರಿಗೆ ಅಂಜಿಕೆ, ಅಳುಕು ಇರಬಾರದು. ಈ ಬಾರಿ ವಿನಯ ಕುಮಾರ್ ಸೊರಕೆಯವರಿಗೆ ಮತ ನೀಡಿ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದರು.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ತಿನ್ನೋ ಉಪ್ಪಿಗೂ ಕೂಡಾ ಜಿ ಎಸ್ ಟಿ ಯನ್ನು ಹಾಕಿ ಬಡವರನ್ನು ಮತ್ತೆ ಬಡತನಕ್ಕೆ ದೂಡಿದ ಬಿಜೆಪಿ ಸರ್ಕಾರ ಇದೀಗ ಅಭಿವೃದ್ಧಿ ಯ ಮಂತ್ರ ಜಪಿಸಿ ಜನರನ್ನು ಮರಳು ಮಾಡುವ ಕಾರ್ಯಕ್ಕೆ ಕೈ ಹಾಕಿದೆ. ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮೂಲಕ 13 ಸಾವಿರ ಕೋಟಿ ರೂ ಗುಳುಂ ಮಾಡಲಾಗಿದೆ. ಬಿಜೆಪಿಗೆ ವಿನಯ ಕುಮಾರ್ ಸೊರಕೆಯವರನ್ನು ದೂಷಿಸಲು ಯಾವುದೇ ಕಾರಣಗಳು ಸಿಗ್ತಾ ಇಲ್ಲ. ಧರಿಸುವ ಬಟ್ಟೆಯಷ್ಟು ಶುಭ್ರವಾಗಿದೆ ಅವರ ವ್ಯಕ್ತಿತ್ವ. ಜನರ ವಿಶ್ವಾಸಕ್ಕೆ ನಂಬಿಕೆಗೆ ಬೆಲೆ ಕೊಡುವ ರಾಜಕಾರಣಿ. ಕಾಪುವಿನ ರಿಪೋರ್ಟ್ ಕಾರ್ಡ್ ನಿಮ್ಮ ಮುಂದಿದೆ.ಊರಿನ ಅಭಿವೃದ್ಧಿ ಗೆ ರಾಜಕಾರಣ ಮಾಡಿದ ಏಕೈಕ ವ್ಯಕ್ತಿ ಸೊರಕೆಯವರು. ಪಕ್ಷದ ಆಂತರಿಕ ಕಾರಣಕ್ಕಾಗಿ ಮಂತ್ರಿ ಸ್ಥಾನ ಹೋದ್ರು ಬೇಸರ ಪಡಿಸದೆ ಕಾಪು ತಾಲೂಕು ಆಗಲೇಬೇಕು ಅಂತಾ ಅನುದಾನ ತಂದವರು.ಪ್ರಾಂಜಲ ಮನಸ್ಸಿನಿಂದ ಪ್ರೀತಿಯಿಂದ ಮಮತೆಯಿಂದ ಸೊರಕೆಯವರ ಪರ ಕಾರ್ಯಕರ್ತರಯ ಕೆಲಸ ಮಾಡಬೇಕಿದೆ. ಸೊರಕೆಯವರ ವಿರೋಚಿತ ಗೆಲುವಿಗಾಗಿ ಕಟಿಬದ್ಧರಾಗಿ ಎಲ್ಲಾ ಸೇರಿ ಹಗಲಿರುಳು ದುಡಿಯಬೇಕು. ಸೋತ ಮೇಲೂ ಅತಿ ಹೆಚ್ಚು ಜನ ಸಂಪರ್ಕವನ್ನು ಇಟ್ಟುಕೊಂಡ ಸೊರಕೆಯವರನ್ನು ಕಾಪುವಿನಜನ ಕಾಪಾಡಿಕೊಳ್ತಾರೆ. ಅನ್ನೋ ನಂಬಿಕೆ ಇದೆ ಎಂದಿದ್ದಾರೆ.
ಕಾಪು ಕಾಂಗ್ರೆಸ್ ಆಭ್ಯರ್ಥಿ ವಿನಯ್ ಕುಮಾರ್ ಸೊರಕೆ ಮಾತನಾಡಿ ಕಾರ್ಮಿಕರ ಮೇಲೆ ಜಿ ಎಸ್ ಟಿ ತೆರಿಗೆ ಮೂಲಕ ಕಾರ್ಮಿಕರನ್ನು ಬೀದಿಗೆ ತಂದಿದ್ದಾರೆ. ಕಾಪುವಿನ ಪ್ರಣಾಳಿಕೆಯಲ್ಲಿ ಕಾರ್ಮಿಕರಿಗೂ ಹೆಚ್ಚಿನ ಮಹತ್ವ ಕೊಟ್ಟಿದ್ಧೀವಿ. ಮತದಾರರ ಮನವೊಲಿಸಿ ಕಾಂಗ್ರೆಸ್ ಕಾರ್ಯಕ್ರಮ ದ ಬಗ್ಗೆ ತಿಳಿಸಿ ಪ್ರತಿಯೊಬ್ಬರೂ ಅಭ್ಯರ್ಥಿ ಯಾಗಿ ಕೆಲಸ ಮಾಡಬೇಕು ಅಂತಾ ಸೊರಕೆ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರಾದ ರಾಜಶೇಖರ ಕೋಟ್ಯಾನ್, ನವೀನ ಚಂದ್ರ ಶೆಟ್ಟಿ,ನವೀನ ಚಂದ್ರ ಸುವರ್ಣ, ದಿನೇಶ್ ಕೋಟ್ಯಾನ್, ರಮೀಜ್, ವಿಶ್ವಾಸ್ ಅಮೀನ್, ಜಿತೇಂದ್ರ ಫುಟಾರ್ಡೊ, ಶೇಖರ ಹೆಜ್ಮಾಡಿ, ಕರುಣಾಕರ ಪೂಜಾರಿ, ಸುಧೀರ್ ಕರ್ಕೇರ, ಯಶವಂತ್, ಅಖಿಲೇಶ್ ಕೋಟ್ಯಾನ್, ದೇವಿ ಪ್ರಸಾದ್ ಶೆಟ್ಟಿ, ಶರ್ಪುದ್ದೀನ್ ಶೇಖ್, ದೀಪಕ್ ಕುಮಾರ್ ಎರ್ಮಾಳ್, ಸುಕುಮಾರ್, ಅಜೀಜ್, ರಮೀಜ್ ಉಪಸ್ಥಿತರಿದ್ದರು.