ಬೆಳ್ತಂಗಡಿ, ಏ 30 (DaijiworldNews/SM) : ಮೋಟಾರು ಸೈಕಲ್ ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಪೋಲೀಸರು ತಡೆದು ನಿಲ್ಲಿಸಿ ವಿಚಾರಿಸಿದಾಗ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುವ ಪ್ರಕರಣ ತಾಲೂಕಿನ ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪೋಲಿಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ ಅವರ ನೇತೃತ್ವದಲ್ಲಿ ವೇಣೂರು ಠಾಣಾ ವ್ಯಾಪ್ತಿಯ ಬಜಿರೆ ಗ್ರಾಮದ ಹಂದೆವು ಮೂರು ಮಾರ್ಗದ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಸಂಶಯಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸಿತ್ತಿರುವುದು ಕಂಡು ಬಂದಿದೆ.ಆರೋಪಿಯನ್ನು ಬಂಧಿಸಿ ಸುಮಾರು ರೂ 37 ಸಾವಿರದ 500 ಗ್ರಾಂ ಗಾಂಜಾ ಹಾಗೂ ಮೋಟಾರು ಸೈಕಲ್ ನ್ನು ವಶಪಡಿಸಲಾಗಿದ್ದು ವೇಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಕಡಬ ತಾಲೂಕಿನ ಸವಣೂರು ಗ್ರಾಮದ ಪ್ರಸಾದ್ ಯಾನೆ ಪಚ್ಚು ಎಂದು ಗುರುತಿಸಲಾಗಿದೆಅರೋಪಿಯು ರೌಡಿ ಶೀಟರ್ ಆಗಿದ್ದು ಅವನ ವಿರುದ್ದ ಪುತ್ತೂರು,ಕಡಬ ಉಪ್ಪಿನಂಗಡಿ ಠಾಣೆಗಳಲ್ಲಿ ಕಳ್ಳತನ, ಹೊಡೆದಾಟ ಪ್ರಕರಣಗಳು ದಾಖಲಾಗಿವೆ. ಕಾರ್ಯಾರಣೆಯಲ್ಲಿ ಪೋಲಿಸ್ ವೃತ್ತ ನಿರೀಕ್ಷಕರ ಜೊತೆ ಸಿಬ್ಬಂದಿಗಳಾದ ಇಬ್ರಾಹಿಂ,ಅಭಿಜಿತ್ ಕುಮಾರ್,ವಿಜಯ್ ಕುಮಾರ್,ಚೌಡಪ್ಪ, ಚಾಲಕ ಚಿದಾನಂದ ಇದ್ದರು.