ಮಂಗಳೂರು, ಏ 30 (DaijiworldNews/HR): ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ 25ನೇ ಬೆಳ್ಳಿ ಹಬ್ಬ ಆಚರಣೆ ವಾರ್ಷಿಕೋತ್ಸವವು ಏಪ್ರಿಲ್ 29ರಂದು ಕೆ ಎಸ್ ಹೆಗ್ಡೆ ಆಡಿಟೋರಿಯಂನಲ್ಲಿ ನಡೆಯಿತು.
ವಾರ್ಷಿಕೋತ್ಸವದ ಮುಖ್ಯ ಅತಿಥಿ ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್ ನ ಘಟಕ ನಿರ್ದೇಶಕ ಎಸ್ ಎಸ್ ವಿನೋದ್ ಅವರು ಭಾಗವಹಿಸಿ, ವಿಧ್ಯಾರ್ಥಿಗಳು ಅವಕಾಶವನ್ನು ಹುಡುಕಿ ಉಪಯೋಗಿಸುವ ಪ್ರಯತ್ನ ಮಾಡಬೇಕು. ಪ್ರಯತ್ನ, ಅವಕಾಶ, ಕಾರ್ಯ ಮಗ್ನತೆ ಯಾವತ್ತೂ ಫಲಪ್ರದವಾಗಿರುತ್ತದೆ. ಇಂದು ಭಾರತ ದೇಶ ಮಿಸೈಲ್ ಸಂಶೋಧನಾ ಮತ್ತು ಉಡ್ಡಯನ ವಿಭಾಗ ದಲ್ಲಿ, ವಿಶ್ವ ದೇಶಗಳಲ್ಲಿ ಅಗ್ರಸ್ಥಾನ ಪಡೆದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಶ್ರೀ ವಿಶಾಲ್ ಹೆಗ್ಡೆ ನೆರವೇರಿಸಿ, ನಿಟ್ಟೆ ಫಿಸಿಯೋಥೆರಪಿ ಸಂಸ್ಥೆಯ 25 ವರ್ಷಗಳ ನಡೆದು ಬಂದ ದಾರಿ, ಎಲ್ಲಾ ಅಭಿವೃದ್ಧಿಗೆ ನಾಂದಿಯಾದ ಶಿಕ್ಷಕರನ್ನು ಸ್ಮರಸುತ್ತಾ, ಬದಲಾವಣೆಗಾಗಿ ನಿರಂತರ ಶ್ರಮಿಸಬೇಕು ಎಂದರು.
ಫಿಸಿಯೋಥೆರಪಿ ಸಂಸ್ಥೆಯ ಪ್ರಾಂಶುಪಾಲ ಡಾಕ್ಟರ್ ಧನೇಶ್ ಕುಮಾರ್ ಅತಿಥಿಗಳನ್ನು ಪರಿಚಯಿಸಿ, ವಾರ್ಷಿಕ ವರದಿಯನ್ನು ಪ್ರಸ್ತಾವಿಸಿದರು.
ಪ್ರಾಧ್ಯಾಪಕಿ ಕು. ರಮ್ಯಾ ಜೈನ್ ಕಾರ್ಯಕ್ರಮವನ್ನು ನಡೆಸಿ ಧನ್ಯವಾದ ಅರ್ಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕು ಭೂಮಿಕಾ ಭಟ್ ಅವರು ವರ್ಷದ ವಿದ್ಯಾರ್ಥಿ ಸಂಘದ ವರದಿ ಓದಿದರು. ಪ್ರಾಧ್ಯಾಪಕಿ ಕು ಐಶ್ವರ್ಯ ನಾಯರ್ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದ ಕೊನೆಯ ಭಾಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಸನ್ಮಾನಿಸಿದರು.