ಬೆಂಗಳೂರು ನ 5: ಅಕ್ರಮ ಅಸ್ತಿ ಸಂಪಾದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಕೆ ಶಿವಕುಮಾರ್ ಆದಾಯ ತೆರಿಗೆ ಇಲಾಖೆಯ ವಿಚಾರಣೆಗಾಗಿ ಈಗಾಗಲೇ 6 ಬಾರಿ ಹಾಜರಾಗಿದ್ದು, ಈಗ ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಇಲಾಖೆ ನೋಟೀಸ್ ನೀಡಿದೆ. ನ. 6 ಮಕ್ಕಳು ಸಹಿತ ಇಡೀ ಕುಟುಂಬ ಹಾಜರಾಗುವಂತೆ ನೋಟಿಸ್ ನೀಡಿದ್ದು ಈ ವಿಚಾರಣೆ 7ನೇ ಬಾರಿಯದ್ದಾಗಿದೆ.
ತಾಯಿ, ಹೆಂಡತಿ, ಮಕ್ಕಳು, ಸಹೋದರ ಸಂಸದ ಡಿ.ಕೆ. ಸುರೇಶ್ ಅವರನ್ನು ಕರೆದುಕೊಂಡು ಖುದ್ದು ಹಾಜರಾಗುವಂತೆ ಐಟಿಇಲಾಖೆ ನೊಟೀಸ್ ನೀಡಿದ್ದು ಇದರಲ್ಲಿ ಸ್ಪಷ್ಟ ವಾಗಿ ಲೆಕ್ಕಪರಿಶೋಧಕರನ್ನು ಕರೆದು ಕೊಂಡು ಬಾರದಂತೆಯೂ ಉಲ್ಲೇಖಿಸಲಾಗಿದೆ.