Karavali
ಉಡುಪಿ: 'ಬಿಜೆಪಿಯ ಮೂಲ ಮಂತ್ರ ಅಭಿವೃದ್ಧಿ' - ಸಚಿವೆ ಶೋಭಾ ಕರಂದ್ಲಾಜೆ
- Sat, Apr 29 2023 06:31:45 PM
-
ಉಡುಪಿ, ಏ 29 (DaijiworldNews/HR): ಕರ್ನಾಟಕವು ಈ ಬಾರಿ ಚುನಾವಣೆಯನ್ನು ಅಭಿವೃದ್ಧಿಯ ಅಜೇಂಡಾವನ್ನು ಇಟ್ಟುಕೊಂಡು ಎದುರಿಸಬೇಕು ಎಂದು ನಮ್ಮ ಪಕ್ಷ ತೀರ್ಮಾನಿಸಿದೆ. ನಮ್ಮ ಮೂಲ ಮಂತ್ರ ಅಭಿವೃದ್ಧಿ. ಅಭಿವೃದ್ಧಿಯ ಮೂಲಕ ಜನರ ಮನಸ್ಸನ್ನು ಗೆಲ್ಲುವಂತಹ ಕೆಲಸವನ್ನು ಮಾಡಬೇಕು. ಡಬಲ್ ಇಂಜಿನ್ ಸರಕಾರಕ್ಕೆ ಆದ್ಯತೆ ಸಿಗಬೇಕು ಎಂದು ಬಿಜೆಪಿಯ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇವತ್ತು ದೇಶದಲ್ಲಿ ಎಲ್ಲಿ ಡಬಲ್ ಇಂಜಿನ್ ಸರ್ಕಾರ ಇರದ ಕೇರಳ, ತಮಿಳುನಾಡು, ತೆಲಂಗಾಣ, ರಾಜಸ್ಥಾನದಂತಹ ಹಲವಾರು ರಾಜ್ಯಗಳಲ್ಲಿ ಮೋದಿಯವರು ಯಾವ ವೇಗದಿಂದ ಕೆಲಸ ಮಾಡುತ್ತಿದ್ದಾರೋ ಮೋದಿಯವರು ಯಾವ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೋ ಆ ವೇಗದ ಜೊತೆ ಹೆಜ್ಜೆ ಹಾಕುವ ಕೆಲಸವನ್ನು ಅಲ್ಲಿನ ಸ್ಥಳೀಯ ಸರಕಾರಗಳು ಮಾಡುತ್ತಿಲ್ಲ. ಇದಕ್ಕೆ ಒಂದು ಸಣ್ಣ ಉದಾಹರಣೆ ನಮ್ಮ ಕರ್ನಾಟಕದ್ದು. ಮೋದಿಯವರು 2018ರಲ್ಲಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದರು. ರಾಜ್ಯ ಸರಕಾರ ರೈತರ ಪಟ್ಟಿಯನ್ನು ಮಾಡಿ ಕೇಂದ್ರಕ್ಕೆ ವರದಿಯನ್ನು ಸಲ್ಲಿಸುವಂತೆ ಎಲ್ಲಾ ರಾಜ್ಯಗಳಿಗೂ ಸೂಚನೆ ಕೊಟ್ಟಿದ್ದೆವು. ಆ ಸಂಧರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೇಡಿಯಸ್ಸ್ ನ ಸಮ್ಮಿಶ್ರ ಸರಕಾರ ಇತ್ತು. ಕೇವಲ ನಾಲ್ಕು ರೈತರ ಪಟ್ಟಿಯನ್ನು ಮಾತ್ರ ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ ಇಂದು ಕರ್ನಾಟಕ ರಾಜ್ಯದಲ್ಲಿ 54 ಲಕ್ಷ ರೈತರ ಖಾತೆಗಳಿಗೆ ಹಣ ರವಾನೆಯಾಗುತ್ತಿದೆ. ಕೇಂದ್ರ ಸರಕಾರ 6,000 ಮತ್ತು ರಾಜ್ಯ ಸರಕಾರದ 4,000 ಒಟ್ಟು 10,000 ಸೇರಿ ರೈತರ ಖಾತೆಗಳಿಗೆ ಹಣವನ್ನು ಹಾಕುತ್ತಿದ್ದೇವೆ. ಇದು ಡಬಲ್ ಇಂಜಿನ್ ನ ಉಪಯೋಗ ಎಂದರು.
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಹೊಸಮುಖಗಳಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. 5 ಕ್ಷೇತ್ರಗಳಲ್ಲಿ 5 ಗೆಲ್ಲಬೇಕು ಎಂಬ ಉದ್ದೇಶ ಇಟ್ಟುಕೊಂಡು ನಮ್ಮ ಕಾರ್ಯಕರ್ತರು ಇಂದು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಶಕ್ತಿನೇ ನಮ್ಮ ಬೂತ್ ಕಾರ್ಯಕರ್ತರು.ನಮ್ಮ ಶಕ್ತಿನೇ ಬೂತ್ ಅಲ್ಲಿ ಇದೆ.ಒಂದು ಬೂತ್ ಗೆ ನಾವು ಹೋದರೆ 99% ಜನಕ್ಕೆ ಕೇಂದ್ರ ಸರಕಾರದ ಅಥವಾ ರಾಜ್ಯ ಸರಕಾರದ ಒಂದಲ್ಲ ಒಂದು ಸೌಲಭ್ಯವನ್ನು ನಾವು ಕೊಟ್ಟಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ ಗೆ ಇವತ್ತು ಅಜೆಂಡಾ ಇಲ್ಲ.ಕಾಂಗ್ರೆಸ್ ಅಭಿವೃದ್ಧಿಯ ಆಧಾರದಲ್ಲಿ ಮತ ಕೇಳಲು ಆಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಬಿಜೆಪಿ ಇದ್ದಾಗ ಕೊಟ್ಟಂತಹ ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್ 60 ವರ್ಷ ಕೊಟ್ಟದ್ದನ್ನ ನಾಲ್ಕು ಪಟ್ಟು ಮೀರಿಸಿದೆ. ಖರ್ಗೆಯವರ ಮಾತು ನಮಗೆಲ್ಲ ನೋವು ತಂದಿದೆ, ಇದು ಖರ್ಗೆಯವರ ಮಾತಲ್ಲ, ಕಾಂಗ್ರೆಸ್ ನ ಮಾತು. ಕಾಂಗ್ರೆಸ್ ನ ಮಾನಸಿಕತೆ. ಪ್ರಧಾನಿ ಕುರ್ಚಿಯೆಂದರೆ ಕೇವಲ ನೆಹರು ಕುಟುಂಬಕ್ಕೆ ಸೀಮಿತ ಎಂಬ ಭಾವನೆ ಅವರಲ್ಲಿದೆ. ಆ ಕರ್ಚಿ ಕಳಕೊಂಡಿದ ತಕ್ಷಣ ವಿಲವಿಲ ಒದ್ದಾಡುತ್ತಿದ್ದಾರೆ, ಅಸಭ್ಯವಾಗಿ ಮಾತನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಾಯಕಿ ಸೊನಿಯಾ ಗಾಂಧಿಯವರನ್ನು ವಿಷಕನ್ಯೆ ಎಂದಿರುವ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಂಜೆ, ಯತ್ನಾಳ್ ಅವರು ಆಡಿರುವ ಮಾತು ಸರಿಯಿಲ್ಲ. ಪ್ರಧಾನಿ ಮೋದಿಯವರನ್ನ ಪದೇ ಪದೇ ಬಹಳ ಕೆಟ್ಟಾದಾಗಿ ಬಿಂಬಿಸುವ ಕಾರಣಕ್ಕಾಗಿ ಬೇಸರ ಮಾಡಿ ಎಲ್ಲಾ ಭಾವನಾತ್ಮಕವಾಗಿ ಯತ್ನಾಳ್ ಅವರು ಮಾತನಾಡಿರಬಹುದು. ಬಿಜೆಪಿಯ ನಾಯಕರು ಅವರ ಹತ್ತಿರ ಮಾತನಾಡುತ್ತೀವಿ. ಬಿಜೆಪಿಯ ಸಂಸ್ಕೃತಿ ಈ ರೀತಿಯ ಪದ ಬಳಕೆ ಮಾಡುವಂತದ್ದಲ್ಲ.ಇದು ಕಾಂಗ್ರೆಸ್ ನ ಸಂಸ್ಕೃತಿ ಎಂದಿದ್ದಾರೆ.
ಇನ್ನು ಬಿಜೆಪಿ ಪ್ರತೀ ಚುನಾವಣೆಯಲ್ಲೂ ಕೂಡ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ವಿವರವನ್ನು ಚುನಾವಣಾ ಆಯೋಗಕ್ಕೆ ನಾವು ಸಲ್ಲಿಸುತ್ತೇವೆ. ಇದಕ್ಕೆ ಮುಖ್ಯ ಕಾರಣ, ಉಳ್ಳಾಲ, ಶಿವಾಜಿ ನಗರದಂತಹ ಜಾಗದಲ್ಲಿ ಹಿಂದೂಗಳ ಮನೆಗಳು ಕೇವಲ 10 ಮನೆಗಳು ಇರುತ್ತವೆ. ಬಾಕಿ ಎಲ್ಲ ಅಲ್ಪಸಂಖ್ಯಾತರ ಮನೆಗಳಾಗಿರುತ್ತವೆ. ಹೀಗಿರುವಾಗ ಮನೆಯಿಂದ ಹೊರಬರಲು ಬಿಡುವುದಿಲ್ಲ. ಅದಕ್ಕಾಗಿ ಕಾರ್ಯಕರ್ತರನ್ನು ಕೇಳಿದ್ದೆವು. ಈ ಬಾರಿ ಇಂತಹ ಸೂಕ್ಷ್ಮ ಮತಗಟ್ಟೆಗಳು ಎಲ್ಲಿದೆ, ಇದರ ವಿವರವನ್ನು ಚುನಾವಣಾ ಆಯೋಗಕ್ಕೆ ಕೊಡುತ್ತೇವೆ. ಚುನಾವಣಾ ಆಯೋಗ ಹೆಚ್ಚಿನ ಸಿಆರ್ ಪಿಯಫ್ ಫೋರ್ಸ್ ಹಾಕಲು, ಪ್ಯಾರ ಮೀಟರ್ ಪಡೆಯನ್ನು ಹಾಕಲು ಅನುಕೂಲವಾಗುತ್ತದೆ. ಚುನಾವಣಾ ಆಯೋಗ ನಡೆಸಿದಂತಹ ಸರ್ವಪಕ್ಷಗಳ ಸಭೆಯಲ್ಲಿ ಚುನಾವಣಾ ಆಯೋಗ ಹೇಳಿದೆ, ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ಕಂಡುಬಂದರೆ ಅದನ್ನ ನೀವು ಸ್ವತಂತ್ರವಾಗಿ ಚುನಾವಣಾ ಆಯೋಗಕ್ಕೆ ಕೊಡಬಹುದು.ಹಾಗಾಗಿ ಈ ಕಾರಣಕ್ಕಾಗಿ ನಾವು ಸೂಕ್ಷ್ಮ ಮತಗಟ್ಟೆಗಳ ವಿವರವನ್ನು ಕೇಳಿದ್ದೇವೆ ಎಂದರು.
ಸೀಮೆಎಣ್ಣೆ ಕೊಡುವಂತದ್ದು ವಿಳಂಬವಾಗಿಲ್ಲ. ನಾವು ಕಾಲ ಕಾಲಕ್ಕೆ ಎಷ್ಟು ಬೇಕೋ ಅಷ್ಟನ್ನು ಬಿಡುಗಡೆ ಮಾಡುತ್ತಿದ್ದೇವೆ. ಕಳೆದ 8-10 ತಿಂಗಳ ಅವಧಿಯಲ್ಲಿ 3 ಬಾರಿ ನಮ್ಮ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆಯನ್ನು ಬಿಡುಗಡೆ ಮಾಡಿದ್ದೇವೆ. ಸೀಮೆಎಣ್ಣೆಯನ್ನು ಬೇರೆಯಲ್ಲೂ ವಿನಿಯೋಗಿಸದೆ, ಕೇವಲ ಮೀನಗಾರಿಗೆ ಉಪಯೋಗ ಮಾಡುತ್ತಿದ್ದೇವೆ. ಯಾವಾಗ ಮನೆ-ಮನೆಗೆ ಗ್ಯಾಸ್ ಕೊಡುವುದು ಆರಂಭವಾಯಿತೋ ಆವಾಗ ಸೀಮೆಎಣ್ಣೆ ಕೂಡ ಕಡಿಮೆಯಾಗಿದೆ. ಇಲಾಖೆ ನಿರ್ಧಾರ ಮಾಡಿದೆ, ಕಾಲ ಕಾಲಕ್ಕೆ ಸೀಮೆಎಣ್ಣೆಯನ್ನು ಕೊಡಬೇಕು ಎಂದು ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಕೊಡುವಂತದ್ದು ವಿಳಂಬವಾಗುತ್ತಿರುವುದರ ಬಗ್ಗೆ ಸ್ಪಷ್ಟತೆ ನೀಡಿದರು.
ಅರುಣ್ ಪುತ್ತಿಲ ಅವರ ಸ್ಪರ್ಧೆಯ ಬಗ್ಗೆ ಮಾತನಾಡಿ, ಬಿಜೆಪಿ ಪಕ್ಷದ ಅಭ್ಯರ್ಥಿ ಅಲ್ಲಿ ಇದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿಯ ಕಾರ್ಯಕತ್ರರು ಕೆಲಸ ಮಾಡುತ್ತಾರೆ ಎಂದರು.
ಸಭೆಯಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್, ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಯಶ್ ಪಾಲ್ ಸುವರ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ,ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಾಕ್ಷ ಕುಯಿಲಾಡಿ ಸುರೇಶ್ ನಾಯ್ಕ್ ಉಪಸ್ಥಿತರಿದ್ದರು.