ಉಡುಪಿ, ಏ 29 (DaijiworldNews/HR): ಕಾಂಗ್ರೆಸ್ ಗ್ಯಾರಂಟಿ ಗುಜರಾತ್, ತ್ರಿಪುರ, ಮಣಿಪುರ, ಉತ್ತರ ಪ್ರದೇಶದಲ್ಲೂ ನಿಡಿತ್ತು, ಅಲ್ಲೆಲ್ಲಾ ಗ್ಯಾರಂಟಿ ಮಕಾಡೆ ಮಲಗಿದೆ. ತಮ್ಮ ಪಕ್ಷಕ್ಕೆ ಗ್ಯಾರಂಟಿ ಇಲ್ಲದ ಸಂಧರ್ಭದಲ್ಲಿ ನಿಮ್ಮ ಗ್ಯಾರಂಟಿಯನ್ನು ಯಾರೂ ನಂಬುವುದಿಲ್ಲ. ಮೋದಿ ಸರಕಾರದ ಗ್ಯಾರಂಟಿ ಸುರಕ್ಷೆ, ಶಾಂತಿ ಮತ್ತು ವಿಕಾಸ ಮಾತ್ರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳಿಗೆ ಪ್ರಣಾಮ ಮಾಡಿ ನನ್ನ ಮಾತನ್ನು ಆರಂಭಿಸುತ್ತಿದ್ದೇನೆ. ನಾರಾಯಣ ಗುರುಗಳು ಸಾಮಾಜಿಕ ಕಾಂತ್ರಿಯನ್ನು ಮಾಡಿದರು. ಶಿಕ್ಷಣ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿದ್ದ ಕಾಲದಲ್ಲಿ ನಾರಾಯಣ ಗುರುಗಳು ಶಿಕ್ಷಣದ ಮೂಲಕ ಕಾಂತ್ರಿಯನ್ನು ಮಾಡಿದರು ಎಂದರು.
ಪಿಎಫ್ಐ ಪ್ರವೀಣ್ ನೆಟ್ಟಾರ್ ನನ್ನು ಹತ್ಯೆ ಮಾಡಿತು. ಅವರು ಜೀವವನ್ನು ನಾನು ಹಿಂದಕ್ಕೆ ತರಲು ಸಾಧ್ಯವಿಲ್ಲ. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದ ಸಂಘಟನೆ ಪಿಎಫ ಐ ಅನ್ನು ನಾವು ಬ್ಯಾನ್ ಮಾಡಿದ್ದೇವೆ. ಕಾಂಗ್ರೆಸ್ ಪಿಎಪ್ಐ ಅನ್ನು ಬೆಂಬಲಿಸಿತ್ತು. ಸಿದ್ದರಾಮಯ್ಯ ಸರ್ಕಾರ ಪಿಎಫ್ ಐ ಮೇಲಿದ್ದ ಕೇಸ್ ಗಳನ್ನು ಹಿಂದಕ್ಕೆ ತೆಗೆಯಿತು. ಕಾಂಗ್ರೆಸ್ ನವರದ್ದು ಓಲೈಕೆ ರಾಜಕೀಯ ಎಂದಿದ್ದಾರೆ.
ಇನ್ನು ವೋಟ್ ಬ್ಯಾಂಕ್ ಗಾಗಿ ದೇಶದ ಭದ್ರತೆಯನ್ನು ರಿಸ್ಕ್ ಗೆ ಹಾಕಿತ್ತು. ಇದು ಎಂಎಲ್ಎ ಮಾಡಲು ಚುನಾವಣೆ ಅಲ್ಲ. ನಿಮ್ಮ ವೋಟ್ ಕರ್ನಾಟಕ ದ ಭವಿಷ್ಯವನ್ನು ಸುರಕ್ಷಿತ ಮಾಡವುದಕ್ಕಾಗಿ. ಬಿಜೆಪಿ ಮಾತ್ರ ದಕ್ಷಿಣ ಕರ್ನಾಟಕವನ್ನು ಸುರಕ್ಷಿತವಾಗಿ ಇಡಲು ಸಾಧ್ಯ. ಒಂದೆಡೆ ಡಬ್ಬಲ್ ಇಂಜಿನ್ ಸರ್ಕಾರ ಇದ್ದಲ್ಲಿ ಇನ್ನೊಂದೆಡೆ ರಾಹುಲ್ ಗಾಂದಿಯ ರಿವರ್ಸ್ ಗೇರ್ ಸರ್ಕಾರ ಇದೆ. ನೀವು ಕೇವಲ ಒಂದೆ ಸಲ ವೋಟ್ ಮಾಡಿದರೂ ಕೂಡಾ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಲಿದ್ದು 24 ರಲ್ಲಿ ಮೋದಿ ಸರಕಾರ ಕೂಡಾ ಬರಲಿದೆ ಎಂದರು.
ಬೃಹತ್ ಸಭೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಭಾಗಿಯಾಗಿದ್ದು, ಕೇಂದ್ರ ಸಚಿವೆ ಶೋಬಾ ಕರಂದ್ಲಾಂಜೆ, ಕಾಪು ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಮತ್ತು ಇತರ ನಾಯಕರು ಭಾಗಿಯಾಗಿದ್ದರು.