ಉಡುಪಿ, ಏ 29 (DaijiworldNews/HR): ಅಭ್ಯರ್ಥಿ ಆಯ್ಕೆ ಪಕ್ರಿಯೆಯಿಂದ ಬೇಸರಗೊಂಡು ಆಮ್ ಆದ್ಮಿ ಪಕ್ಷದ ಉಡುಪಿ ಅಧ್ಯಕ್ಷ ಡೊಲ್ಪಿ ಲುವಿಸ್, ಸಂಘಟನಾ ಕಾರ್ಯದರ್ಶಿ ಕೀರ್ತಿ ರಾಜ್, ರಾಜ್ಯ ಜಂಟಿ ಕಾರ್ಯದರ್ಶಿ ದಿವಾಕರ್ ಸನಿಲ್ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಜ್ಯ ಜಂಟಿ ಕಾರ್ಯದರ್ಶಿ ದಿವಾಕರ್ ಸನಿಲ್, ಪಕ್ಷ ಅಭ್ಯರ್ಥಿ ಆಯ್ಕೆಗೆ ಓರ್ವನನ್ನು ನೇಮಿಸಿತ್ತು. ಪಕ್ಷದ ವರಿಷ್ಟರ ಮಾತಿಗೆ ಬೆಲೆ ನೀಡಿ ನಾನು ಆಕಾಂಕ್ಷಿಯಾಗಿದ್ದ ನಾನು ಕೂಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಆದರೆ ಬೆಂಗಳೂರಿನಲ್ಲಿ ಓರ್ವ ಆಕಾಂಕ್ಷಿ ಬಂದಿದ್ದರು. ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಜಿಲ್ಲಾ ಸಮಿತಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕೆ ಬೇಸರ ಇಲ್ಲ. ಆಯ್ಕೆ ಮಾಡಿರುವ ಪ್ರೊಸೆಸ್ ಮೇಲೆ ಬೇಜಾರು ಇದೆ ಎಂದರು.
ಇನ್ನು ಆಕಾಂಕ್ಷಿ ಆದವರು ತಮ್ಮದೇ ಬೇರೆಯದೇ ಕಚೇರಿಯನ್ನು ಮಾಡಿದ್ದಾರೆ. ನಾವು ಈಗ ಪಕ್ಷ ಬಿಡುವ ತಿರ್ಮಾನ ಮಾಡಿದ್ದು ಸಲ್ಲಿಸಿದ್ದೇವೆ ಎಂದಿದ್ದಾರೆ.
ಆಪ್ ಉಡುಪಿ ಜಿಲ್ಲಾದ್ಯಕ್ಷ ಡೊಲ್ಪಿ ಲುವಿಸ್ ಮಾತನಾಡಿ, ಸೇವೆ ಮತ್ತು ಪಕ್ಷದ ಉದ್ದೇಶಗಳನ್ನು ನಂಬಿ ನಾವು ಪಕ್ಷ ಸೇರಿದ್ದೆವು. ಆದರೆ ಪಕ್ಷ ನಮ್ಮನ್ನು ನಡೆಸಿಕೊಂಡ ರೀತಿಯಿಂದ ನೊಂದಿದ್ದೇವೆ ಎಂದಿ ಹೇಳಿದ್ದಾರೆ.