ಮೂಡುಬಿದಿರೆ, ಏ 29 (DaijiworldNews/MS): ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಶಾಸಕಾಂಗ ಚಟುವಟಿಕೆಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಇಂಡಿಯಾ ಮತ್ತು ಕರ್ನಾಟಕ ಎಲೆಕ್ಷನ್ ವಾಚ್ ನಡೆಸಿದ ಸಮೀಕ್ಷೆಯ ವರದಿ ಪ್ರಕಾರ, ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ವಿಧಾನಸಭೆ ಸದನದಲ್ಲಿ ಪ್ರಶ್ನೆ ಕೇಳುವ ವಿಚಾರದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಅಸಂಬದ್ಧ ಹೇಳಿಕೆ ನೀಡದ ನೇರ ನಡೆಯ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಅವರು ಈ ವಿಧಾನಸಭೆ ಅವಧಿಯಲ್ಲಿ 24 ಮೌಖಿಕವಾಗಿ ಹಾಗೂ 478 ಲಿಖಿತ ಪ್ರಶ್ನೆಗಳು ಸೇರಿದಂತೆ ಒಟ್ಟು 502 ಪ್ರಶ್ನೆಗಳನ್ನು ಕೇಳಿದ್ದರು.
ಅಸಂಬದ್ಧ ಹೇಳಿಕೆ ನೀಡದ ನೇರ ನಡೆಯ ರಾಜಕಾರಣಿಯಾಗಿರುವ ಉಮಾನಾಥ್ ಕೋಟ್ಯಾನ್ ಅವರು ರಾಜ್ಯದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಸರ್ಕಾರದ ಸಚಿವರ ಕಾರ್ಯವೈಖರಿಯ ಬಗ್ಗೆ ಒಮ್ಮೆ ವಾಗ್ದಾಳಿ ನಡೆಸಿದ್ದರು. ಇದಲ್ಲದೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ್ಯ ಹೆಸರಿಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಸುದ್ದಿಯಾಗಿದ್ದರು.
ಕರಾವಳಿ ಭಾಗದ ಶಾಸಕರ ಪೈಕಿ, ಬಂಟ್ವಾಳದ ಶಾಸಕ ರಾಜೇಶ್ ಯು ನಾಯಕ್ (93% ಹಾಜರಾತಿ ಮತ್ತು 142 ಪ್ರಶ್ನೆಗಳು), ಮಂಗಳೂರು ನಗರ ಉತ್ತರದಿಂದ ಡಿ ವೇದವ್ಯಾಸ ಕಾಮತ್ (91% ಹಾಜರಾತಿ, 146 ಪ್ರಶ್ನೆ), ಮಂಗಳೂರು ನಗರ ಉತ್ತರದಿಂದ ವೈ ಭರತ್ ಶೆಟ್ಟಿ (85% ಹಾಜರಾತಿ,153 ಪ್ರಶ್ನೆ ), ಮತ್ತು ಬೆಳ್ತಂಗಡಿಯ ಹರೀಶ್ ಪೂಂಜಾ (80% ಹಾಜರಾತಿ ಮತ್ತು 124 ಪ್ರಶ್ನೆ) ಸಮೀಕ್ಷೆಯ ಪ್ರಕಾರ ಉತ್ತಮ ಸಾಧನೆ ಮಾಡಿದ್ದಾರೆ.
ಸಂಜೀವ್ ಮಠಂದೂರು ಕಲಾಪದಲ್ಲಿ148 ದಿನಗಳು ಭಾಗವಹಿಸಿದ್ದು, ಬೈಂದೂರಿನ ಬಿ ಎಂ ಸುಕುಮಾರ ಶೆಟ್ಟಿ 137 ದಿನಗಳು ಹಾಜರಾಗಿ ಒಟ್ಟು 360 ಪ್ರಶ್ನೆಗಳನ್ನು ಕೇಳಿದ್ದರು., ಕಾಪುವಿನ ಲಾಲಾಜಿ ಆರ್ ಮೆಂಡನ್ ಅವರು 87% ಹಾಜರಾತಿ ಹೊಂದಿದ್ದು 120 ಪ್ರಶ್ನೆಗಳನ್ನು ಕೇಳಿದ್ದರು. ಉಡುಪಿಯ ಕೆ ರಘುಪತಿ ಭಟ್ 78% ಹಾಜರಾತಿ ಮತ್ತು 335 ಪ್ರಶ್ನೆಗಳನ್ನು ಮುಂದಿಟ್ಟಿದ್ದರು. 2023ರ ಈ ಬಾರಿ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಡೆಯಲು ರಘುಪತಿ ಸಫಲರಾಗಿಲ್ಲ