ಕಾರ್ಕಳ, ಏ 28 (DaijiworldNews/SM): ಉತ್ತಮ ಆಡಳಿತ ನಡೆಸುವ ಮೂಲಕ ದೇಶ, ವಿದೇಶಗಳಲ್ಲಿ ಗಮನ ಸೆಳೆದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕಾಂಗ್ರೆಸ್ ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಮಾನಕರ ಹೇಳಿಕೆಯೂ ದೇಶಕ್ಕೆ ತೋರಿದ ಅವಮಾನವೆಂದು ಸಚಿವ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತ ವ್ಯಕ್ತಪಡಿಸಿದರು.
ವಿಕಾಸ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ರಾಜಕರಣಕೋಸ್ಕರ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ನೀಡಿರುವ ಅವಮಾನಕರ ಹೇಳಿಕೆಯನ್ನು ಸಮಾಜವು ಸಹಿಸುವುದಿಲ್ಲ. ಈ ಹಿಂದೆಯೂ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ,ಸಿದ್ಧರಾಮಯ್ಯ ಇವರು ಪದೇ ಪದೇ ಅವಮಾನಕಾರ ಹೇಳಿಕೆ ನೀಡುತ್ತಿದುದ್ದು ಖಂಡನಾರ್ಹವಾಗಿದೆ.
ಗಾಂಧಿ ಕುಟುಂಬದ ರಾಜಕೀಯ ಓಲೈಕೆಗಾಗಿ ಪ್ರಧಾನಿಯನ್ನು ದೂಷಿಸುವುದಕ್ಕೆ ಉಗ್ರಖಂಡನೆ ವ್ಯಕ್ತಪಡಿಸಿದ ಸಚಿವ ಸುನೀಲ್ ಕುಮಾರ್ ಅವರು ಕಾಂಗ್ರೆಸ್ ರಾಷ್ಟೀಯ ಅಧ್ಯಕ್ಷ ಹಣೆಯಲ್ಲಿದ್ದ ಕುಂಕುಮವನ್ನು ಒರೆಸಿರುವುದು ನೋಡಿದಾಗ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರ ಹಣೆಯಿಂದಲೂ ಕುಂಕುಮ ಒರೆಸುತ್ತಾರೆಂದು ಭಾಸವಾಗುತ್ತದೆ. ಸಿದ್ಧರಾಮಯ್ಯನವರಿಗೆ ಮೊದಲಿನಿಂದಲೇ ಕುಂಕುಮ ವೆಂದರೆ ತುಂಬ ಅಲರ್ಜಿ. ಕಾಂಗ್ರೆಸ್ನ ಕಾರ್ಯಧ್ಯಕ್ಷನಿಗೆ ಹಿಂದು ಎಂಬುವುದು ಅಶೀಲ್ಲ ಪದವೆಂದು ಹೀಗೆಳೆದಿರುವುದು ಭಾರತ ಸಂಸ್ಕೃತಿ ಮಾರಕ. ರಾಜ್ಯದ ಮತದಾರರು ಎಚ್ಚರಿಕೆ ವಹಿಸಿಕೊಳ್ಳವ ಕಾಲ ಕೂಡಿಬಂದಿದೆ ಎಂದರು.
ತುಷ್ಟೀಕರಣ ರಾಜಕರಣಕ್ಕೆ ಒಂದು ಇತಿ ಮಿತಿ ಎಂಬುವುದು ಇದೆ ಎಂದು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ ವರ್ತನೆಯನ್ನು ಖಂಡಿಸಿದರು.