ಉಡುಪಿ, ಏ 28 (DaijiworldNews/SM): ‘ಗದಗದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಅವಹೇಳನಕಾರಿ ಹೇಳಿಕೆ ನೀಡಿರುವುದು, ಪ್ರಧಾನಿಯನ್ನ ವಿಷಪೂರಿತ ಹಾವಿಗೆ ಹೋಲಿಸಿರುವುದು ಖಂಡನೀಯ. ಜಗತ್ತೇ ಮೆಚ್ಚಿದಂತಹ ದೇಶದ ಜನರ ಪ್ರೀತಿ, ಗೌರವವನ್ನ ಕಾರ್ಯದ ಮೂಲಕ, ಸಾಧನೆಗಳ ಮೂಲಕ ಹೃದಯವನ್ನು ಗೆದ್ದಿರುವವರು ನಮ್ಮ ಪ್ರಧಾನಿ ಮೋದಿಯವರ’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯ್ಕ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರ ಮಾತಿಗೆ ಉಡುಪಿ ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು.“ಬಿಜೆಪಿ ತನ್ನ ಸಾಧನೆಗಳನ್ನ ಜನರ ಮುಂದೆ ಇಡುತ್ತಿದ್ದರೆ,ಕಾಂಗ್ರೆಸ್ ತನ್ನ ಸುಳ್ಳು ಯೋಜನೆಗಳ ಮೂಲಕ ಜನರ ಮುಂದೆ ಹೋಗುತ್ತಿದೆ. ಕಾಂಗ್ರೆಸ್ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುತ್ತದೆ,ವಂಶವಾದದ ಗ್ಯಾರೆಂಟಿ ಯಾಗುತ್ತದೆ, ಭ್ರಷ್ಟಚಾರದ ಗ್ಯಾರೆಂಟಿ ಯಾಗುತ್ತದೆ,ಪಿಎಫ್ಐ ನಿಷೇಧದ ಗ್ಯಾರೆಂಟಿಯಾಗುತ್ತದೆ ಎನ್ನುವುದುಜನರಿಗೆತಿಳಿದಿದೆ”
“ಈ ಬಾರಿ ಉಳ್ಳಾಲದ ಪ್ರಭಾರಿಯಾಗಿ, ವಿಧಾನ ಪರಿಷತ್ತಿನ ನನ್ನೆಲ್ಲಾ ಪ್ರದೇಶಾಭಿವೃದ್ಧಿಯ ಅನುದಾನವನ್ನು ಮುಖ್ಯವಾಗಿ ಮಂಗಳೂರು ಕ್ಷೇತ್ರಕ್ಕೆ ಕೊಟ್ಟು ಓಡಾಡುತ್ತಿರುವ ಹಿನ್ನಲೆಯಲ್ಲಿ, ನಾನು ಗಮನಿಸಿದಂತೆ ಈ ಬಾರಿ 13ಕ್ಕೆ 13 ಸ್ಥಾನಗಳನ್ನ ಬಿಜೆಪಿ ವಿಜಯಗಳಿಸುತ್ತದೆ” ಎಂದರು.
ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೇಯ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ನಾಯಕ್ ಅವರು “ಪುತ್ತೂರಿನಲ್ಲಿ ನೇರ ಸ್ಪರ್ಧೇ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾತ್ರ. ಈ ಹಿಂದೆ ಕೂಡಾ ಇಂತಹ ಪರಿಸ್ಥಿತಿ ಬಂದಾಗ ಬಿಜೆಪಿ ಅಲ್ಲಿ ಗೆದ್ದಿದೆ. ಪಕ್ಷೇತರ ಅಭ್ಯರ್ಥಿಯಾಗಲೀ, ಕಾಂಗ್ರೆಸ್ ಅಭ್ಯರ್ಥಿಯಾಗಲಿ, ಬಿಜೆಪಿ ಭದ್ರಕೋಟೆ ಪುತ್ತೂರಿನಲ್ಲಿ ಜನ ತಮ್ಮ ಮತವನ್ನು ಹಿಂದುತ್ವದ ಪರವಾಗಿ ನಿಂತ ಪಕ್ಷದ ಶಿಸ್ತಿನ ಸಿಪಾಯಿಯಂತೆ ಕಳೆದ 30 ವರ್ಷಗಳಿಂದ ದುಡಿದ ಮಹಿಳೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದನ್ನು ಜನರ ಗುರುತಿಸಿದ್ದಾರೆ, ಪುತ್ತೂರಿನಲ್ಲಿ ಎಲ್ಲಾ ವಿವಾದಗಳ ನಡುವೆ ನಾವು ಗೆಲ್ಲುತ್ತೇವೆ. ಬಿಜೆಪಿಯಿಂದ ಹೊರಹೋಗಿ ನಿಂತ ತಕ್ಷಣ ಹಿಂದುತ್ವದ ಕುರಿತಾಗಿ ಮಾತನಾಡುವ ನೈತಿಕತೆಯನ್ನು ಕಳೆದುಕೊಳ್ಳುತ್ತಾರೆ.ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿ ಹಿಂದೂತ್ವದ ಶಕ್ತಿಯನ್ನ ಗಟ್ಟಿಪಡಿಸಬೇಕಾದಂತದ್ದು ನಿಜವಾದ ಹಿಂದೂತ್ವದ ಕಾರ್ಯಕರ್ತನ ಗುಣಧರ್ಮ.ಅದರಿಂದ ಹೊರಹೋಗುತ್ತಿದ್ದಾರೆ ಎಂದರೆ ಅವರು ಹಿಂದುತ್ವದ ವಿರುದ್ಧವಾಗಿಯೇ ಹೋಗುತ್ತಿದ್ದಾರೆ ಎಂಬುದನ್ನ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಎಲ್ಲರದ್ದೂ ಹಿಂದುತ್ವವೇ. ಕಾಂಗ್ರೆಸ್ ನಲ್ಲಿ ಇರುವವರು ಹಿಂದುಗಳಲ್ಲವೇ? ಯಾವುದಕ್ಕೆ ಪೂರಕವಾಗಿ ನೀವು ನಿಲುವು ತೆಗೆದುಕೋಳುತ್ತೀರಿ ಎಂಬುವುದು ಮುಖ್ಯ. ನೀವು ಗೆಲ್ಲುವುದೇ ಇಲ್ಲ ಬ ಸ್ಥಿತಿಯಲ್ಲಿ ಇರುವಾಗ ಹೊರಗೆ ಹೋಗಿ ಚುನಾವಣೆಗೆ ನಿಲ್ಲುತ್ತೀರಿ ಎಂದರೆ ಯಾರಿಗೆ ಸಹಾಯ ಮಾಡಲು ಈ ಸ್ಫರ್ಧೆ. ನಮ್ಮದು ರಾಷ್ಟ್ರೀಯ ಪಕ್ಷ, ಎಲ್ಲಾ ಬೂತ್ ಗಳಲ್ಲಿ ಕೂಡಾ ನಮ್ಮ ಕಾರ್ಯಕರ್ತರು ಚುನಾವಣೆಗೆ ಸಿದ್ದರಾಗಿದ್ದಾರೆ ” ಎಂದು ಅವರು ಹೇಳಿದ್ದಾರೆ.