ಮಂಗಳೂರು, 28 (DaijiworldNews/HR): ಚೇತನಾಸ್ ಬ್ಯೂಟಿ ಲಾಂಜ್ನ ಅಂಗವಾದ ಚೇತನಾಸ್ ಎಜುಕೇಶನ್ ಫೌಂಡೇಶನ್ನ ಏರ್ಬ್ರೆಶ್ ಎಚ್ಡಿ ಮೇಕಪ್ ಕೋರ್ಸ್ನ ಮೊದಲ ಬ್ಯಾಚ್ ನ ಪದವಿ ಪ್ರದಾನ ಸಮಾರಂಭವು ಹೋಟೆಲ್ ಎಜೆ ಗ್ರ್ಯಾಂಡ್ನಲ್ಲಿ ನಡೆದಿದ್ದು, 17 ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಅವರ ಕೈಚಳಕದಲ್ಲಿ ವಿವಿಧ ರೀತಿಯ ಮೆಕಪ್ ಲುಕ್ಗಳು ಪ್ರದರ್ಶನಗೊಂಡಿದೆ.
ವಿಕೆ ನವತಾರೆ ಸೀಸನ್ 5 ಮತ್ತು ಮಿಸ್ ಕರ್ನಾಟಕ 2023 ರ ವಿಜೇತರಾದ ತನಿಷ್ಕಾ ಮೂರ್ತಿ ಅವರು ಪದವಿ ದಿನವನ್ನು ಉದ್ಘಾಟಿಸಿದ್ದು, ಫೋರ್ಡರ್ ಅಕಾಡೆಮಿಯ ನಿರ್ದೇಶಕಿ, ಮೈಂಡ್ ಥೆರಪಿಸ್ಟ್ ತನುಜಾ ಮಾಬೆನ್ ಗೌರವ ಅತಿಥಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತುಳು ನಾಟಕ ಕಲಾವಿದ, ತುಳು ಚಲನಚಿತ್ರ ನಟ ಹರಿಶ್ಚಂದ್ರ ಪೆರಾಡಿ ಅವರನ್ನು ಸಂಪೂರ್ಣವಾಗಿ ಮೆಕಪ್ ಮೂಲಕ ಹುಡುಯಾಗಿ ಬದಲಾಯಿಸಿರುವುದು ಎಲ್ಲರ ಗಮನ ಸೆಳೆದಿದ್ದು, ಅವರ ಹುಡುಗಿ ಲುಕ್ ನ ಪೋಟೊ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹುಡುಗಿಯಂತೆ ಮೆಕಪ್ ಮಾಡಿದ್ದು, ಯಾಂಪ್ ವಾಕ್ ಮಾಡಿದರು. ಚೇತನಾ ಅವರು ಹರಿಶ್ಚಂದ್ರ ಪೆರಡಿಯವರ ಸಂಪೂರ್ಣ ನೋಟವನ್ನು ಬದಲಿಸಿ, ಕಡಿಮೆ ಆಭರಣಗಳನ್ನು ಬಳಸಿ ಕೇಶವಿನ್ಯಾಸವನ್ನು ರಚಿಸಿದರು.
ಚೇತನಾಸ್ ಬ್ಯೂಟಿ ಲಾಂಜ್ನ ಮಾಲೀಕರಾಗಿರುವ ಚೇತನಾ ಎಸ್ ಅವರು ಮಂಗಳೂರಿನ ಪ್ರಖ್ಯಾತ ಬ್ಯೂಟಿಷಿಯನ್ ಆಗಿದ್ದು, ಅವರು 26 ವರ್ಷಗಳಿಂದ ವೃತ್ತಿಯಲ್ಲಿದ್ದಾರೆ. ಅವರು ಮೇಕಪ್ ಮತ್ತು ಕೇಶವಿನ್ಯಾಸದಲ್ಲಿ ತರಬೇತಿ ಪಡೆಯಲು ಹಲವಾರು ದೇಶಗಳಿಗೆ ಭೇಟಿ ನೀಡಿದ್ದಾರೆ. ಇತರ ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಬ್ಯೂಟಿಷಿಯನ್ ಕೋರ್ಸ್ಗಳು, ಅಡ್ವಾನ್ಸ್ ಮೇಕಪ್ ಮತ್ತು ಹೇರ್ ಸ್ಟೈಲ್ಗಾಗಿ ಚೇತನಾ ಪಾರ್ಲರ್ಗೆ ಭೇಟಿ ನೀಡುತ್ತಾರೆ.
ಸಂಪರ್ಕ:
ಚೇತನಾ ಬ್ಯೂಟಿ ಲೌಂಜ್
ಜಾಸ್ಮಿನ್ ಎದುರು ಕೊಲಾಕೊ ಆಸ್ಪತ್ರೆ
ಬೆಂದೂರ್ ವೆಲ್ - ಮಂಗಳೂರು - 575002
Ph: 0824 - 4250454, +91 9108583714 ಮತ್ತು +91 9845292411