ಬೈಂದೂರು, ಏ.27 (DaijiworldNews/SM): ಭಯೋತ್ಪಾದಕ ಕೃತ್ಯಗಳನ್ನು ಮಟ್ಟಹಾಕಲು, ಅದನ್ನು ಬೆಂಬಲಿಸುವವರನ್ನು ನಿಯಂತ್ರಿಸಿ ದೇಶ ಹಾಗೂ ರಾಜ್ಯದ ಸುಭದ್ರತೆಗೆ ಮತ್ತೊಮ್ಮೆ ರಾಜ್ಯದ ಜನತೆ ಬಿಜೆಪಿಗೆ ಮತ ನೀಡಲು ತಯಾರಾಗಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ಸರಕಾರದಲ್ಲಿ ಮೀನುಗಾರರಿಗೆ ಅತೀ ಹೆಚ್ಚು ಅನುಕೂಲವಾದ ಯೋಜನೆಗಳು ದೊರೆತಿದೆ.ಈಗಾಗಲೇ ಬಾಕಿ ಉಳಿದಿರುವ ನಾಡದೋಣಿ ಮೀನುಗಾರರ ಸೀಮೆಎಣ್ಣೆ ಕೂಡ ಹಂತ ಹಂತವಾಗಿ ಬಿಡುಗಡೆಯಾಗಿದೆ. ಮರವಂತೆ ಮೀನುಗಾರರು ಮತದಾನ ಬಹಿಷ್ಕರಿಸುವ ವಿಷಯ ಅವರ ಹಕ್ಕಿನ ಆಗ್ರಹಕ್ಕಾಗಿ ಸರಿಯಿದೆ.ಈ ಬಗ್ಗೆ ಜಿಲ್ಲಾ„ಕಾರಿಗಳ ಜೊತೆ ಮಾತನಾಡಿದ್ದೇನೆ.ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಜೊತೆ ಮರವಂತೆಗೆ ಶೀಘ್ರದಲ್ಲಿ ಬೇಟಿ ನೀಡುತ್ತೇನೆ ಎಂದರು.
ಕಾಂಗ್ರೇಸ್ ಪಕ್ಷ ಭಯೋತ್ಪಾದಕರಿಗೆ ಬೆಂಬಲ ಕೊಡುವ ಪಕ್ಷವಾಗಿದೆ. ಅಂತಹ ಪಕ್ಷವನ್ನು ಗೆಲ್ಲಿಸಬಾರದು. ಗುರುರಾಜ್ ಗಂಟಿಹೊಳೆ ಸಾಮಾನ್ಯ ಕಾರ್ಯಕರ್ತರಾಗಿದ್ದು ಬೈಂದೂರು ಜನತೆ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯಕ್ಕೆ ಒಳ್ಳೆಯ ಸಂದೇಶ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ| ಜ್ಯೋತಿ ಪಾಂಡ್ಯ, ಶ್ಯಾಮಲ ಎಸ್.ಕುಂದರ್,ಮಹೇಂದ್ರ ಪೂಜಾರಿ,ಸುರೇಶ ಬಟ್ವಾಡಿ,ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಪ್ರಜ್ವಲ್ ಶೆಟ್ಟಿ ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ,ಮಾಧ್ಯಮ ಸಂಚಾಲಕ ಗಣೇಶ ಗಾಣಿಗ ಉಪ್ಪುಂದ ಹಾಜರಿದ್ದರು.