ಮಂಗಳೂರು, ಏ 27 (DaijiworldNews/MS): ನಗರದ ಶಕ್ತಿನಗರದಲ್ಲಿರುವ "ಸಾನಿಧ್ಯ" ಭಿನ್ನ ಸಾಮಾರ್ಥ್ಯ ದ ಮಕ್ಕಳ ವಸತಿಯುತ ಶಾಲೆ ಮತ್ತು ತರಭೇತಿ ಸಂಸ್ಥೆಯಲ್ಲಿ ಸಾನಿಧ್ಯ ಹೈಡ್ರೋ ಈಜುಕೊಳದ ಉದ್ಘಾಟನೆಯೂ ಏ.28 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ ಹೇಳಿದರು.
ಸಾನಿಧ್ಯ ಸಂಸ್ಥೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಟಿಸಂ, ಬಹುವಿಧ ನ್ಯೂನತೆ, ಮೆದುಳಿನ ಪಾರ್ಶ್ವ ಹಾಗೂ ಬುದ್ದಿಮಾಂದ್ಯತೆಯನ್ನು ಹೊಂದಿರುವ ಮಕ್ಕಳಿಗೆ ಅಕ್ವಟಿಕ್ ಥೆರಪಿಯನ್ನು ನೀಡಲು ಹೈಡ್ರೋ ಈಜು ಕೊಳದ ಉಪಯುಕ್ತವಾಗಲಿದೆ. ಅಕ್ವಟಿಕ್ ಥೆರಪಿಯಿಂದ ಸೂಕ್ಷ್ಮ ಹಾಗೂ ವಿಶಾಲ ಸ್ನಾಯುಗಳ ಕೌಶಲ ಅಭಿವೃದ್ಧಿ , ಸಂಧುಗಳ ನೋವು ನಿವಾರಣೆ, ಮಾನಸಿಕ ಉತ್ತಡದ ಇಳಿಮುಖ ಸೇರಿ ಹಲವು ಉಪಯೋಗಗಳು ಆಗಲಿದೆ. ಏ.28 ರಂದು ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಆಗಿರುವ ಮೆಲ್ವಿನ್ ಪಿಂ
ಟೋ ಯಸ್.ಜೆ ಹೈಡ್ರೋ ಈಜು ಕೊಳವನ್ನು ಉದ್ಘಾಟಿಸಲಿದ್ದಾರೆ. ಲಯನ್ಸ್ ಜಿಲ್ಲಾ ರಾಜ್ಯಪಾಲ ಲಯನ್ ಸಂಜಿತ್ ಶೆಟ್ಟಿ, ಡೈಜಿವರ್ಲ್ಡ್ ವಾಹಿನಿಯ ನಿರ್ದೇಶಕ ಹೇಮಾಚಾರ್ಯ, ಹೆರಿಕ್ ಬಿ ಡಿಸೋಜಾ, ರಾಷ್ಟ್ರೀಯ ಈಜುಪಟು ಬೇಂಗ್ರೆ ಆನಂದ್ ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಗಣೇಶ ಸೇವಾ ಟ್ರಸ್ಟಿನ ಅಧ್ಯಕ್ಷ ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕದಲ್ಲೇ ವಿಶೇಷ ಮಕ್ಕಳ ಶಾಲೆಯಲ್ಲಿ ಅಕ್ವೆಟಿಕ್ ಥೆರಪಿಯನ್ನು ಪ್ರಥಮವಾಗಿ ನೀಡಲಾಗುತ್ತಿದ್ದು, ಇನ್ನೂ ಈ 20 ಲಕ್ಷ ವೆಚ್ಚದ ಹೈಡ್ರೋ ಈಜು ಕೊಳವನ್ನು ಹೆರಿಕ್ ಡಿಸೋಜಾ ಮತ್ತು ಸ್ನೇಹಿತರ ನೆರವಿನಿಂದ ನಿರ್ಮಾಣವಾಗಿದೆ ಎಂದರು. ಈ ಸಂದರ್ಭ ಸಂಸ್ಥೆಯ ಖಜಾಂಜಿ ಜಗದೀಶ್ ಶೆಟ್ಟಿ, ಜತೆ ಕಾರ್ಯದರ್ಶಿ ರಾಧಾಕೃಷ್ಣ, ನಿರ್ದೇಶಕರಾದ ಸ್ಟೀಫನ್ ಪಿಂಟೋ, ಮಹಮ್ಮದ್ ಬಶೀರ್, ಸಲಹಾ ಸಮಿತಿಯ ಪ್ರಕಾಶ್ ಮತ್ತು ಹೆರಿಕ್ ಡಿಸೋಜಾ ಉಪಸ್ಥಿತರಿದ್ದರು.