ಉಡುಪಿ, ಏ 27 (DaijiworldNews/MS): ಬೇಸಿಗೆ ಬಿಸಿಲು ಏರಿದಂತೆ ಚುನಾವಣಾ ಪ್ರಚಾರದ ಕಾವು ಏರಿದ್ದು, ಸುಡು ಬಿಸಿಲಿನ ನಡುವೆಯೂ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದಾರೆ.
ಉಡುಪಿಯಲ್ಲಿ ಚುನಾವಣಾ ಬಿರುಸಿನ ಪ್ರಚಾರದ ನಡುವೆ ಅಭ್ಯರ್ಥಿಗಳ ಅಪರೂಪದ ಭೇಟಿಯಾಗಿದೆ. ಒಂದೇ ಕ್ಷೇತ್ರದಲ್ಲಿರಾಜಕೀಯ ಎದುರಾಳಿಗಳಾದ ಉಡುಪಿಯ ಬಿಜೆಪಿ , ಕಾಂಗ್ರೆಸ್ ಅಭ್ಯರ್ಥಿಗಳು ಪರಸ್ಪರ ಮುಖಾಮುಖಿಯಾಗಿದ್ದಾರೆ.
ಆರೂರು ಮಹಾತೋಭರ ವಿಷ್ಣುಮೂರ್ತಿ ದೇವಸ್ಥಾನದ ಸನ್ನಿಧಾನದಲ್ಲಿಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಪರಸ್ಪರ ಮುಖಾಮುಖಿಯಾದಾಗ
ಪರಸ್ಪರ ಹಸ್ತಲಾಘವ ಮಾಡಿ ಶುಭಾಶಯ ಕೋರಿದ ಸ್ವಾರಸ್ಯಕರ ಘಟನೆ ನಡೆಯಿತು.