ಮಂಗಳೂರು, ಏ 25 (DaijiworldNews/HR): ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 60 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ:
ಜನತಾದಳ(ಜಾತ್ಯಾತೀತ)ದ ಅಶ್ರಫ್ಲಿಕುಂಞ ಮುಂಡಾಜೆ, ಆಮ್ಆದ್ಮಿ ಪಕ್ಷದಿಂದ ಜನಾರ್ಧನ ಬಂಗೇರ, ಕಾಂಗ್ರೆಸ್ ಪಕ್ಷದಿಂದ ರಕ್ಷಿತ್ ಶಿವರಾಂ, ಭಾರತೀಯ ಜನತಾ ಪಾರ್ಟಿಯಿಂದ ಹರೀಶ್ಪೂಂಜ, ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಅಕ್ಬರ್ ಬೆಳ್ತಂಗಡಿ, ಸರ್ವೋದಯ ಕರ್ನಾಟಕ ಪಕ್ಷದಿಂದ ಆದಿತ್ಯ ನಾರಾಯಣ ಕೊಲ್ಲಾಜೆ, ತುಳುವರೇ ಪಕ್ಷದಿಂದ ಶೈಲೇಶ ಆರ್.ಜೆ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಹೇಶ್ ಆಟೋ.
ಮೂಡುಬಿದ್ರೆ ವಿಧಾನಸಭಾ ಕ್ಷೇತ್ರ:
ಜನತಾದಳ (ಜಾತ್ಯಾತೀತ) ಪಕ್ಷದಿಂದ ಡಾ. ಅಮರಶ್ರೀ ಅಮರನಾಥ ಶೆಟ್ಟಿ, ಭಾರತೀಯ ಜನತಾ ಪಾರ್ಟಿಯಿಂದ ಉಮಾನಾಥ್ ಕೋಟ್ಯಾನ್, ಕಾಂಗ್ರೆಸ್ ಪಕ್ಷದಿಂದ ಮಿಥುನ್ ಎಂ. ರೈ, ಆಮ್ ಆದ್ಮಿ ಪಕ್ಷದಿಂದ ವಿಜಯನಾಥ ವಿಠಲ ಶೆಟ್ಟಿ, ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷದಿಂದ ಅಲ್ಫೋನ್ಸ್ ಫ್ರಾಂಕೊ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ದಯಾನಂದ, ಪಕ್ಷೇತರರಾಗಿ ಈಶ್ವರ ಎಸ್. ಮೂಡುಶೆಟ್ಟಿ ಹಾಗೂ ದುರ್ಗಾ ಪ್ರಸಾದ್.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ:
ಕಾಂಗ್ರೆಸ್ ಪಕ್ಷದಿಂದ ಇನಾಯತ್ ಅಲಿ, ಭಾರತೀಯ ಜನತಾ ಪಾರ್ಟಿಯಿಂದ ಭರತ್ ಶೆಟ್ಟಿ ವೈ, ಜನತಾದಳ (ಜಾತ್ಯಾತೀತ) ಪಕ್ಷದಿಂದ ಮೊಯುದ್ದೀನ್ ಭಾವ, ಆಮ್ ಆದ್ಮಿ ಪಕ್ಷದಿಂದ ಸಂದೀಪ್ ಪಿ. ಶೆಟ್ಟಿ, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಿಂದ ಧಮೇರ್ಂದ್ರ, ಹಿಂದೂಸ್ತಾನ್ ಜನತಾ ಪಾರ್ಟಿ ಸೆಕ್ಯುಲರ್ ಪಕ್ಷದಿಂದ ಬಿ. ಪ್ರವೀಣ್ ಚಂದ್ರರಾವ್, ಉತ್ತಮ ಪ್ರಜಾಕೀಯ ಪಕ್ಷದಿಂದ ಪ್ರಶಾಂತ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಯಶೋಧ, ಪಕ್ಷೇತರರಾಗಿ ಮೆಕ್ಸಿ ಪಿಂಟೊ ಹಾಗೂ ಎಚ್. ವಿನಯ ಆಚಾರ್ಯ.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ:
ಕಾಂಗ್ರೆಸ್ ಪಕ್ಷದಿಂದ ಜೆ.ಆರ್. ಲೋಬೊ, ಭಾರತೀಯ ಜನತಾ ಪಾರ್ಟಿಯಿಂದ ಡಿ. ವೇದವ್ಯಾಸ್ ಕಾಮತ್, ಆಮ್ ಆದ್ಮಿ ಪಕ್ಷದಿಂದ ಕೆ. ಸಂತೋಷ್ ಕಾಮತ್, ಜನತಾದಳ (ಜಾತ್ಯಾತೀಯ) ಪಕ್ಷದಿಂದ ಸುಮತಿ ಎಸ್. ಹೆಗಡೆ, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಿಂದ ಧಮೇರ್ಂದ್ರ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನ್ನಿ ಪಿಂಟೋ, ಜನಹಿತ ಪಕ್ಷದಿಂದ ಸುಪ್ರೀತ್ ಕುಮಾರ್ ಪೂಜಾರಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್. ಪೈ.
ಮಂಗಳೂರು ವಿಧಾನಸಭಾ ಕ್ಷೇತ್ರ:
ಕಾಂಗ್ರೆಸ್ ಪಕ್ಷದಿಂದ ಯು.ಟಿ. ಖಾದರ್ ಫರೀದ್, ಆಮ್ ಆದ್ಮಿ ಪಕ್ಷದಿಂದ ಮೊಹಮ್ಮದ್ ಆಶ್ರಫ್, ಭಾರತೀಯ ಜನತಾ ಪಾರ್ಟಿಯಿಂದ ಸತೀಶ್ ಕುಂಪಲ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಿಂದ ರಿಯಾಜ್ ಫರಂಗಿಪೇಟೆ, ಪಕ್ಷೇತರ ಅಭ್ಯರ್ಥಿಯಾಗಿ ದೀಪಕ್ ರಾಜೇಶ್ ಕುವೆಲ್ಲೊ.
ಬಂಟ್ವಾಳ ವಿಧಾನಸಭಾ ಕ್ಷೇತ್ರ:
ಆಮ್ಆದ್ಮಿ ಪಕ್ಷದಿಂದ ಪುರುಷೋತ್ತಮ ಗೌಡ ಕೋಲ್ಪೆ, ಜನತಾದಳ ಪಕ್ಷದಿಂದ ಪ್ರಕಾಶ್ ಗೋಮ್ಸ್, ಕಾಂಗ್ರೆಸ್ ಪಕ್ಷದಿಂದ ಬಿ. ರಮಾನಾಥ ರೈ, ಭಾರತೀಯ ಜನತಾ ಪಾರ್ಟಿ ಯಿಂದ ರಾಜೇಶ್ ನಾಯ್ಕ್. ಯು., ಹಾಗೂ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಇಲ್ಯಾಸ್ ಮೊಹಮ್ಮದ್ ತುಂಬೆ.
ಪುತ್ತೂರು ವಿಧಾನಸಭಾ ಕ್ಷೇತ್ರ:
ಕಾಂಗ್ರೆಸ್ ಪಕ್ಷದಿಂದ ಅಶೋಕ್ ಕುಮಾರ್ ರೈ., ಭಾರತೀಯ ಜನತಾ ಪಕ್ಷದಿಂದ ಆಶಾ ತಿಮ್ಮಪ್ಪ, ಜನತಾದಳ(ಜಾತ್ಯಾತೀತ) ಪಕ್ಷದಿಂದ ದಿವ್ಯ ಪ್ರಭ ಗೌಡ, ಆಮ್ಆದ್ಮಿ ಪಕ್ಷದಿಂದ ಡಾ. ಬಿ.ಕೆ. ವಿಶುಕುಮಾರ್ ಗೌಡ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಶಾಫಿ ಬೆಳ್ಳಾರೆ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಐವನ್ ಫೆರಾವೋ ಪಿ., ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಸುಂದರ ಕೊಯಿಲ.
207-ಸುಳ್ಯ ವಿಧಾನಸಭಾ ಚುನಾವಣಾ ಕ್ಷೇತ್ರ:
ಕಾಂಗ್ರೆಸ್ ಪಕ್ಷದಿಂದ ಜಿ. ಕೃಷ್ಣಪ್ಪ ರಾಮಕುಂಜ, ಭಾರತೀಯ ಜನತಾ ಪಾರ್ಟಿಯಿಂದ ಭಾಗೀರಥಿ ಮುರುಳ್ಯ, ಜನತಾದಳ (ಜಾತ್ಯಾತೀತ) ಪಕ್ಷದಿಂದ ಎಚ್.ಎಲ್ ವೆಂಕಟೇಶ್, ಆಮ್ಆದ್ಮಿ ಪಕ್ಷದಿಂದ ಸುಮನ ಬೆಳ್ಳಾರ್ಕಾರ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಗಣೇಶ ಎಂ.(ಸುಧೀಶ್), ಉತ್ತಮ ಪ್ರಜಾಕೀಯ ಪಾರ್ಟಿ ಪಕ್ಷದಿಂದ ರಮೇಶ್ ಬೂಡು ಸುಳ್ಯ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸುಂದರ ಮೇರಾ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಗುರುವಪ್ಪ ಕಲ್ಲುಗುಡ್ಡೆ ಅಂತಿಮವಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಾಗಿದ್ದಾರೆ ಎಂದು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.