ಬಂಟ್ವಾಳ, ಏ 24 (DaijiworldNews/SM): ವಿಧಾನಸಭಾ ಕ್ಷೇತ್ರದಿಂದ 5 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಸ್ಪರ್ಧೆಗೆ ಅಧಿಕೃತವಾಗಿ ಉಳಿದಿದ್ದು, ಓರ್ವ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದು, ನಾಮಪತ್ರ ಹಿಂಪಡೆದುಕೊಂಡಿದ್ದಾರೆ.
ಎಸ್.ಡಿ.ಪಿ.ಐ.ಪಕ್ಷದ ಅಭ್ಯರ್ಥಿ ಅಬ್ದುಲ್ ಮಜೀದ್ ನಾಮಪತ್ರ ಹಿಂಪಡೆದುಕೊಂಡಿದ್ದು,ಕಣದಲ್ಲಿ ಒಟ್ಟು 5 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಒಟ್ಟು 8 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಅದರಲ್ಲಿ 2 ಮಂದಿ ಅಭ್ಯರ್ಥಿಗಳ ನಾಮಪತ್ರ ಬಲವಾದ ಕಾರಣಗಳಿಂದ ತಿರಸ್ಕೃತಗೊಂಡಿದ್ದು,ಒಟ್ಟು 6 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.
ಆದರೆ ಇಂದು ಎ.24 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಎಸ್.ಡಿ.ಪಿ.ಪಕ್ಷದಿಂದ ಒರ್ವ ಅಭ್ಯರ್ಥಿ ನಾಮಪತ್ರ ಹಿಂಪಡೆದುಕೊಂಡಿದ್ದಾನೆ. ಎಸ್. ಡಿ.ಪಿ.ಐ.ಪಕ್ಷದಿಂದ ಇಲ್ಯಾಸ್ ಮಹಮ್ಮದ್ ತುಂಬೆ ಹಾಗೂ ಅಬ್ದುಲ್ ಮಜೀದ್ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆಯ ದಿನವಾದ ಇಂದು ಇಬ್ಬರಲ್ಲಿ ಒಬ್ಬ ಅಭ್ಯರ್ಥಿ ಹಿಂಪಡೆದುಕೊಂಡು ಇಲ್ಯಾಸ್ ಮಹಮ್ಮದ್ ತುಂಬೆ ಅವರಿಗೆ ಸ್ಪರ್ಧೆ ಮಾಡಲು ಅವಕಾಶ ಮಾಡಿದ್ದಾರೆ.