ಉಡುಪಿ, ಏ 24 (DaijiworldNews/MS): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರದ ಸಲುವಾಗಿ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಎಪ್ರಿಲ್ 26 ರಂದು ಆಗಮಿಸಲಿದ್ದು ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮೇ 4 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸುತಿದ್ದು ಮುಲ್ಕಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ಬಿಜೆಪಿಯ ಮಾಹಿತಿ ಕೇಂದ್ರದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, "ಯೋಗಿಯವರ ಕಾರ್ಯಕ್ರಮದಲ್ಲಿ ಬೈಂದೂರು, ಕುಂದಾಪುರ ಕ್ಷೇತ್ರಗಳಿಗೆ ಸಂಬಂಧಿಸಿ ನಡೆದರೆ, ಪ್ರಧಾನ ಮಂತ್ರಿ ಮೋದಿಯವರ ಕಾರ್ಯಕ್ರಮದಲ್ಲಿ ಉಡುಪಿ, ಕಾಪು, ಕಾರ್ಕಳ, ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರಗಳಿಗಾಗಿ ನಡೆಯಲಿದೆ. ಕಾರ್ಯಕ್ರಮಕ್ಕೆ ಈಗಾಗಲೇ ಸ್ಥಳ ನಿಗದಿ ಕೂಡಾ ಆಗಿದೆ" ಎಂದರು.
ಜಿಲ್ಲೆಯಲ್ಲಿ ಎಪ್ರಿಲ್ 25 ಮತ್ತು ಎಪ್ರಿಲ್ 26ರಂದು ಮಹಾಪ್ರಚಾರ ಅಭಿಯಾನ ನಡೆಯಲಿದೆ. ಕರ್ನಾಟಕದ ವಿಧಾನಸಭೆ ಚುನಾವಣೆಯ ಅಭಿಯಾನವು ರಾಜ್ಯದಾದ್ಯಂತ ನಡೆಯುತ್ತಿದೆ. ಬಿಜೆಪಿಯು ಈ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡು, ಮೇ.10ರವರೆಗೆ ವಿವಿಧ ಯೋಜನೆಗಳನ್ನು ರೂಪಿಸಿಕೊಂಡಿದೆ. ಚುನಾವಣಾ ನಾಮಪತ್ರದ ಕಾರ್ಯವೈಖರಿಯಿಂದ ಹಿಡಿದು, ಚುನಾವಣಾ ಪ್ರಚಾರದ ತನಕ ನಾವು ಸಾಗಿದ್ದೇವೆ. ಇದರಲ್ಲಿ ವಿಶೇಷವಾಗಿ ಎಪ್ರಿಲ್ 25 ಮತ್ತು ಎಪ್ರಿಲ್ 26ರಂದು ಜಿಲ್ಲೆಯಲ್ಲಿ ಮಹಾಪ್ರಚಾರ ಅಭಿಯಾನ ನಡೆಯಲಿದೆ. ನಮ್ಮ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೂ ಬೇರೆ,ಬೇರೆ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದೇವೆ. ಫಲಾನುಭವಿಗಳ ಸಂಪರ್ಕ, ಕಾಲೋನಿಗಳಲ್ಲಿ ಪ್ರಚಾರ, ರೋಡ್ ಶೋ ಕೂಡ ಮಾಡಲಿದ್ದಾರೆ “ ಎಂದರು.
“ಬೈಂದೂರಿಗೆ ಮಹರಾಷ್ಟ್ರ ಸರಕಾರದ ವಿಧಾನ ಸಭಾ ಪರಿಷತ್ತಿನ ಸದಸ್ಯರಾದ ಪ್ರವೀಣ್ ಧಾರೆಕಾರ್ ಅವರು, ಎಪ್ರಿಲ್ 25ರಂದು ಬೆಳಿಗ್ಗೆ ಅಲ್ಲಿನ ಸ್ಥಳಿಯಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಸಂಜೆ ಗಂಗೊಳ್ಳಿಯಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ. ದಿನಾಂಕ 26ರಂದು ವಿಶೇಷ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕುಂದಾಪುರಕ್ಕೆ ಜಿಲ್ಲೆಯ ಚುನಾವಣಾ ಉಸ್ತವಾರಿಗಳಾಗಿ ದೆಹಲಿಯ ವಿಪಕ್ಷ ನಾಯಕರು ಮತ್ತು ಶಾಸಕರಾದ ವಿಜೇಂದ್ರ ಗುಪ್ತ ಅವರು ಕರ್ತವ್ಯ ನಿರ್ವಹಿಸಿತ್ತಿದ್ದಾರೆ. ಕುಂದಾಪುರದಲ್ಲಿ ರೋಡ್ ಶೋ , ಫಲಾನುಭವಿಗಳ ಸಭೆ ,ಸಮುದಾಯಗಳ ಸಭೆಯನ್ನು ಮಾಡಲಿದ್ದಾರೆ. ಉಡುಪಿಯ ಮಹಾ ಪ್ರಚಾರದ ಸಭೆಗೆ ಕೇಂದ್ರ ಸಹಕಾರ ಕ್ಷೇತ್ರ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ರಾಜ್ಯ ಖಾತೆ ಸಚಿವರಾದ ಪಿ.ಎಲ್. ವರ್ಮ ಅವರು ಆಗಮಿಸಲಿದ್ದಾರೆ ಡಾ| ವಿ.ಎಸ್ ಆಚಾರ್ಯರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಹಿರಿಯರಾದ ಸೋಮಶೇಖರ್ ಭಟ್, ಗುಜ್ಜಾಡಿ ಪ್ರಭಾಕರ್ ನಾಯಕರ ಮನೆಗೆ ಭೇಟಿ ನೀಡಲಿದ್ದಾರೆ.ಸಂಜೆ 5 ಗಂಟೆಗೆ ಸಂತೆಕಟ್ಟೆಯಿಂದ ಆರ್ಶೀವದ್ ತನಕ ರೋಡ್ ಶೋ ನಡೆಯಲಿದೆ.ಜೊತೆಯಲ್ಲಿ ಎಲ್ಲಾ ಅಭ್ಯರ್ಥಿಗಳು, ಸ್ಥಳಿಯ ನಾಯಕರು, ಶಾಸಕರು ಭಾಗವಹಿಸಲಿದ್ದಾರೆ.
ಸಮಾಜ ಕಲ್ಯಾಣ ಖಾತೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಕಾಪುವಿನಲ್ಲಿ ನಡೆಯುವ ಅಭಿಯಯಾನದಲ್ಲಿ ಭಾಗವಹಿಸಲಿದ್ದಾರೆ. ಫಲಾನುಭವಿಗಳ ಸಂಪರ್ಕ, ಸಮುದಾಯದ ಸಭೆಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳೊಂದಿಗೆ ಸಭೆಗಳನ್ನ ಆಯೋಜಿಸುತ್ತಾರೆ. ಕಾರ್ಕಳದಲ್ಲಿ ಕೂಡ ಮಹಾ ಪ್ರಚಾರ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾರ್ಯಲಯದ ಕಾರ್ಯದರ್ಶಿಯಾದ ಸತ್ಯಾನಂದ ನಾಯಕ್, ಜಿಲ್ಲಾ ಮಾಧ್ಯಮ ಸಂಚಾಲಕರಾದ ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.