ಉಡುಪಿ, ಏ 22 (DaijiworldNews/MS): ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಕ್ತಾಯವಾಗಿ ಇದೀಗ ನಡೆದಿರುವ ನಾಮಪತ್ರ ಪರೀಶೀಲನೆಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲೆಯಲ್ಲಿ ಕಾರ್ಕಳ ದಲ್ಲಿ 2 ಹಾಗೂ ಕುಂದಾಪುರದಲ್ಲಿ ಒಂದು ಸೇರಿದಂತೆ ಒಟ್ಟು 3 ನಾಮಪತ್ರ ತಿರಸ್ಕತವಾಗಿದೆ. ಉಳಿದಂತೆ ಅಂತಿಮವಾಗಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 42 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಇವರಲ್ಲಿ ಓರ್ವ ಮಹಿಳೆ ಕೂಡಾ ಇದ್ದಾರೆ. ಉಡುಪಿ ಕ್ಷೇತ್ರದಲ್ಲಿ ಜನತಾದಳ (ಜಾತ್ಯಾತೀತ) ದಿಂದ ದಕ್ಷತ್ ಆರ್ ಶೆಟ್ಟಿ, ಆಮ್ ಆದ್ಮಿ ಪಕ್ಷದಿಂದ ಪ್ರಭಾಕರ್ ಪೂಜಾರಿ, ಕಾಂಗ್ರೆಸ್ ನ ಪ್ರಸಾದ್ ರಾಜ್ ಕಾಂಚನ್, ಬಿಜೆಪಿಯ ಯಶ್ ಪಾಲ್ ಸುವರ್ಣ, ಉತ್ತಮ ಪ್ರಜಾಕೀಯ ಪಕ್ಷದ ನಿತಿನ್ ವಿ ಪೂಜಾರಿ, ಕೆರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಮ್ ದಾಸ್ ಭಟ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಇದರ ಶೇಖರ್ ಹಾವಂಜೆ, ಮತ್ತು ಸ್ವತಂತ್ರ ಅಭ್ಯರ್ಥಿಗಳಾಗಿ ಕೃಷ್ಣಮೂರ್ತಿ ಆಚಾರ್ಯ ಮತ್ತು ದೀನಾ ಪ್ರಭಾಕರ್ ಸ್ಪರ್ಧಿಸುತ್ತಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ 6 ಪುರುಷರು ಮತ್ತು ಓರ್ವ ಮಹಿಳೆ ಸೇರಿದಂತೆ ಒಟ್ಟು 7 ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ, ಕಾಂಗ್ರೆಸ್ ನ ವಿನಯ್ ಕುಮಾರ್ ಸೊರಕೆ, ಜಾತ್ಯಾತೀತ ಜನತಾದಳದ ಸಬಿನಾ ಸಮದ್, ಆಮ್ ಆದ್ಮಿ ಪಕ್ಷದಿಂದ ಸ್ಟೇಫನ್ ರಿಚರ್ಡ್ ಲೋಬೋ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಮಹಮ್ಮದ್ ಹನೀಫ್ ಸ್ಪರ್ಧಿಸುತ್ತಿದ್ದು, ಪಕ್ಷೇತರರಾಗಿ ಅಬ್ದುಲ್ ರಜಾಕ್ ಶಾಬನ್ ಅಹ್ಮದ್ ಮತ್ತು ಅಬ್ದುಲ್ ರಹಿಮಾನ್ ಸ್ಪರ್ದೇ ನಡೆಸುತ್ತಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮಂದಿ ಸ್ಪರ್ಧೆ ನಡೆಸುತ್ತಿದ್ದು ಒಟ್ಟು 11 ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ 9 ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಕಾಂಗ್ರೆಸ್ ನ ಉದಯ್ ಶೆಟ್ಟಿ, ಆಮ್ ಆದ್ಮಿ ಪಾರ್ಟಿಯ ಡೇನಿಯಲ್ ಫೆಡ್ರಿಕ್ ರೇಂಜರ್, ಜನತಾದಳದ ಶ್ರೀಕಾಂತ ಪೂಜಾರಿ, ಭಾರತೀಯ ಜನತಾ ಪಾರ್ಟಿಯ ವಿ ಸುನಿಲ್ ಕುಮಾರ್, ಉತ್ತಮ ಪ್ರಜಾಕೀಯ ಪಕ್ಷದಿಂದ ಅರುಣ್ ದೀಪಕ್ ಮೆಂಡೋನ್ಸಾ, ಪಕ್ಷೇತರರಾಗಿ ಕೃಷ್ಣ ಶೆಟ್ಟಿ, ಪ್ರಮೋದ್ ಮುತಾಲಿಕ್, ಡಾಕ್ಟರ್ ಮಮತಾ ಹೆಗ್ಡೆ, ವಿದ್ಯಾಲಕ್ಷ್ಮಿ, ಸುಧಾಕರ ಆಚಾರ್ಯ, ಮತ್ತು ಹರೀಶ್ ಅಧಿಕಾರಿ ಸ್ಪರ್ಧೆ ನಡಸುತ್ತಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಆರು ಮಂದಿ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ., ಬಿಜೆಪಿಯ ಕಿರಣ್ ಕುಮಾರ್ ಕೊಡ್ಗಿ, ಆಮ್ ಆದ್ಮಿ ಪಕ್ಷದ ಜಯರಾಜ್, ಕಾಂಗ್ರೆಸ್ ನ ದಿನೇಶ್, ಜನತಾದಳದಿಂದ ರಮೇಶ್, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ ಸ್ಪರ್ಧಿಸುತಿದ್ದು, ಪಕ್ಷೇತರರಾಗಿ ಚಂದ್ರ ಹರಿಜನ, ಸ್ಪರ್ಧೆ ಮಾಡುತ್ತಿದ್ದಾರೆ,.
ಬೈಂದೂರು ಕ್ಷೇತ್ರದಲ್ಲಿ ಒಟ್ಟು 9 ಮಂದಿ ಕಣದಲ್ಲಿದ್ದಾರೆ. ಬಿಜೆಪಿಯ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಾಂಗ್ರೆಸ್ ನ ಕೆ ಗೋಪಾಲ ಪೂಜಾರಿ, ಜನತಾದಳದ ಮನ್ಸೂರ್ ಇಬ್ರಾಹಿಂ, ಆಮ್ ಆದ್ಮಿ ಪಕ್ಷದ ರಾಮನಂದ ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್ ಎಸ್, ರಾಷ್ಟ್ರೀಯ ಸಮಾಜ ದಳದ ಕೊಲ್ಲೂರು ಮಂಜುನಾಥ್ ನಾಯಕ್ ಕಣದಲ್ಲಿದ್ದು, ಪಕ್ಷೇತರರಾಗಿ ಚಂದ್ರ ಹರಿಜನ, ಶ್ಯಾಮ ಬಿ ಮತ್ತು ಹೆಚ್ ಸುರೇಶ್ ಪೂಜಾರಿ ಸ್ಪರ್ಧಿಸುತ್ತಿದ್ದಾರೆ.