ಬೆಂಗಳೂರು, ಏ 21 (DaijiworldNews/MS): ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಇದೇ ಮೊದಲ ಬಾರಿ ಶೇ 74.67 ಫಲಿತಾಂಶ ಲಭ್ಯವಾಗಿದೆ. ಇನ್ನು ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಅನನ್ಯ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು 600ಕ್ಕೆ 600ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಸಾತ್ವಿಕ್ ಪದ್ಮನಾಭ ಭಟ್, ಸ್ಮಯಾ ಸದಾನಂದ ಮಾಬೆನ್ ಮತ್ತು ಜೆಸ್ವಿತಾ ಡಯಾಸ್
ಇನ್ನು ಉಡುಪಿಜಿಲ್ಲೆಯ ವಿಜ್ಞಾನ ವಿಭಾಗದಲ್ಲಿ 4 ವಿದ್ಯಾರ್ಥಿಗಳು ಟಾಪರ್ ಆಗಿದ್ದು ಎಂಜಿಎಂ ಕಾಲೇಜಿನ ಸಾತ್ವಿಕ ಹಾಗೂ ಪ್ರಜ್ಞಾ ಕಾಲೇಜಿನ ಜೆಸ್ವಿತಾ ಡಯಾಸ್ 595 2ನೇ ಸ್ಥಾನ ಪಡೆದುಕೊಂಡಿದ್ದಾರೆ. ವೆಂಕಟರಮಣ ಕಾಲೇಜು ಕುಂದಾಪುರ, ಸ್ನೇಹಾ ಐ ರಾವ್ ಹಾಗೂ ಸ್ಮಯಾ ಸದಾನಂದ ಮುಬೇನ್ 594 3 ನೇ ಸ್ಥಾನ. ಕಾರ್ಕಳ ಜ್ಞಾನ ಸುಧಾ ಕಾಲೇಜಿನ ಸ್ಮಯಾ ಸದಾನಂದ ಮುಬೇನ್ 594 3ನೇ ಸ್ಥಾನ ಪಡೆದಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಶೇ.61.22, ವಾಣಿಜ್ಯ ವಿಭಾಗದಲ್ಲಿ ಶೇ.75.89, ವಿಜ್ಞಾನ ವಿಭಾಗದಲ್ಲಿ ಶೇ.85.71 ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ(ಶೇ.95) ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 524209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 80.72 ವಿದ್ಯಾರ್ಥಿನಿಯರು ಹಾಗೂ ಬಾಲಕರು ಶೇ 69.05 ಸಾಧಿಸಿದ್ದಾರೆ.