ಮಂಗಳೂರು, ಏ.20 (DaijiworldNews/SM): ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಹಿನ್ನೆಲೆ ದ.ಕ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 35 ಅಭ್ಯರ್ಥಿಗಳು ಒಟ್ಟು 45 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಜನಾರ್ದನ್, ಬಿಜೆಪಿಯ ಹರೀಶ್ ಪೂಂಜ (2 ಸೆಟ್), ಜೆಡಿಎಸ್ನ ಅಶ್ರಫ್ ಆಲಿ ಕುಂಞಿ, ಪಕ್ಷೇತರ ಅಭ್ಯರ್ಥಿಯಾಗಿ ಕೆ. ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಸಿದ್ದಾರೆ.
ಮೂಡುಬಿದಿರೆ ಕ್ಷೇತ್ರದಿಂದ ಜೆಡಿಎಸ್ನ ಅಮರಶ್ರೀ ಅಮರನಾಥ ಶೆಟ್ಟಿ (2 ಸೆಟ್), ಬಿಜೆಪಿಯ ಉಮನಾಥ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳೂರು ನಗರ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ನ ಇನಾಯತ್ ಅಲಿ (2 ಸೆಟ್), ಜೆಡಿಎಸ್ನ ಮೊಯ್ದಿನ್ ಬಾವ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಂ.ನವಾಝ್ ಮತ್ತು ಉಸ್ಮಾನ್ ನಾಮಪತ್ರ ಸಲ್ಲಿಸಿದ್ದಾರೆ.
ಮಂಗಳೂರು ನಗರ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ನ ಜೆ.ಆರ್.ಲೋಬೊ (4 ಸೆಟ್), ಜೆಡಿಎಸ್ನ ಸುಮತಿ ಎಸ್. ಹೆಗ್ಡೆ (2 ಸೆಟ್), ಜನಹಿತ ಪಕ್ಷದ ಸುಪ್ರೀತ್ ಕುಮಾರ್ ಪೂಜಾರಿ, ಆಮ್ ಆದ್ಮಿ ಪಕ್ಷದ ಶನನ್ ಲಾರೆನ್ಸ್ ಪಿಂಟೊ, ಪಕ್ಷೇತರ ಅಭ್ಯರ್ಥಿಯಾಗಿ ಕೆ. ಸುಬ್ರಾಯ ಪೈ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ನ ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್ (3 ಸೆಟ್), ಬಿಜೆಪಿಯ ಸತೀಶ್ ಕುಂಪಲ ಮತ್ತು ಚಂದ್ರಹಾಸ, ಆಮ್ ಆದ್ಮಿ ಪಕ್ಷದ ಮುಹಮ್ಮದ್ ಅಶ್ರಫ್, ಜನ ಹಿತ ಪಕ್ಷದ ಬಾಲಕೃಷ್ಣ ಪೂಜಾರಿ ಬೋಳಿಯಾರ್, ಎಸ್ಡಿಪಿಐನ ಮುಹಮ್ಮದ್ ಅಥಾವುಲ್ಲಾ ಎ, ಜೆಡಿಎಸ್ನ ಅಲ್ತಾಫ್ ನಾಮಪತ್ರ ಸಲ್ಲಿಸಿದ್ದಾರೆ. ಬಂಟ್ವಾಳ ಕ್ಷೇತ್ರದಿಂದ ಕಾಂಗ್ರೆಸ್ನ ರಮಾನಾಥ್ ರೈ, ಜೆಡಿಎಸ್ನ ಪ್ರಕಾಶ್ ರಫಾಯಲ್ ಗೊಮ್ಸ್, ಆಮ್ ಆದ್ಮಿ ಪಕ್ಷದ ಪುರುಷೋತ್ತಮ್, ಉತ್ತಮ ಪ್ರಜಾಕೀಯ ಪಕ್ಷದ ಅನಿಶ್ ಶೆಟ್ಟಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಬಿ.ಟಿ. ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಪುತ್ತೂರು ಕ್ಷೇತ್ರದಿಂದ ಬಿಜೆಪಿಯ ಆಶಾ ತಿಮ್ಮಪ್ಪ (2 ಸೆಟ್) ಜೆಡಿಎಸ್ನಿಂದ ದಿವ್ಯ ಪ್ರಭಾ, ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ನಾಮಪತ್ರ ಸಲ್ಲಿಸಿದ್ದಾರೆ. ಸುಳ್ಯ ಕ್ಷೇತ್ರದಿಂದ ಬಿಜೆಪಿಯ ಭಾಗಿರಥಿ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಗಣೇಶ ಎಂ., ಪಕ್ಷೇತರ ಅಭ್ಯರ್ಥಿಯಾಗಿ ಗುರುವಪ್ಪ, ಸುಂದರ್ ಮೇರಾ, ಸತೀಶ್ ಬಿ. ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 82 ಅಭ್ಯರ್ಥಿಗಳಿಂದ 109 ನಾಮಪತ್ರಗಳು ಸಲ್ಲಿಕೆಯಾಗಿವೆ. ಎ.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಎ.24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮೇ 10ರಂದು ಚುನಾವಣೆ ನಡೆಯಲಿದೆ. ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.