ಮಂಗಳೂರು, ಏ 19 (DaijiworldNews/HR): ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.

ಮಂಗಳೂರಿನ ಕಣ್ಣೂರಿನ ಬೋರುಗುಡ್ಡೆ ನಿವಾಸಿ ಫಝಲ್ ಅಲಿಯಾಸ್ ಮೊಹಮ್ಮದ್ ಫಝಲ್ ಅಲಿಯಾಸ್ ಪಚ್ಚು ಮಲ್ಲೂರು (32), ಅಡ್ಯಾರ್ ಮಸೀದಿ ಬಳಿಯ ನಿವಾಸಿ ಮೊಹಮ್ಮದ್ ಅಶ್ರಫ್ ಅಲಿಯಾಸ್ ಅಚ್ಚ (42), ಅಡ್ಯಾರ್ ಪದವು ಮತ್ತು ರೈಲ್ವೆ ಗೇಟ್ ಬಳಿಯ ನಿವಾಸಿ ಮೊಹಮ್ಮದ್ ಅಲ್ತಾಫ್ (26) ಬಂಧಿತರು.
ಫಝಲ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆ, ಮಂಗಳೂರು ಗ್ರಾಮಾಂತರ ಠಾಣೆ, ಕಂಕನಾಡಿ ನಗರ ಠಾಣೆ, ಮಂಗಳೂರು ಉತ್ತರ ಪೊಲೀಸ್ ಠಾಣೆ (ಬಂದರ್), ಬಜ್ಪೆ ಠಾಣೆ ಮತ್ತು ಬರ್ಕೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ಅಶ್ರಫ್ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ಅಲ್ತಾಫ್ ವಿರುದ್ಧ ಬರ್ಕೆ ಪೊಲೀಸ್ ಠಾಣೆ, ಪಣಂಬೂರು ಪೊಲೀಸ್ ಠಾಣೆ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.