ಉಡುಪಿ, ಏ 19 (DaijiworldNews/HR): ಅಪರಿಚಿತ ವ್ಯಕ್ತಿಯೋರ್ವ ಟೆಲಿಗ್ರಾಮ್ ಆ್ಯಪ್ ನಲ್ಲಿ ಟ್ರೇಡಿಂಗ್ ವ್ಯವಹಾರದ ಬಗ್ಗೆ ನಂಬಿಸಿ ಲಿಂಕ್ ಕಳುಹಿಸಿ 4,20,341 ರೂ. ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂದೀಪ ಕುಮಾರ್ ಎಂಬವರಿಗೆ ಟೆಲಿಗ್ರಾಮ್ ಆ್ಯಪ್ ನಲ್ಲಿ ಟ್ರೇಡಿಂಗ್ ವ್ಯವಹಾರದ ಬಗ್ಗೆ AMBLIN Entertainment ಎಂಬ ಸಂಸ್ಥೆ ಎಂದು ನಂಬಿಸಿ http://www.amblinfilmrating.com ಲಿಂಕ್ ಕಳುಹಿಸಿ ಅದಕ್ಕೆ ಹಣವನ್ನು ಡಿಪಾಸಿಟ್ ಮಾಡುವಂತೆ ತಿಳಿಸಿ, ಆ ಸಮಯದಲ್ಲಿ ಹಣ ರಿಟರ್ನ್ ಬಂದಿದ್ದು, ಇದನ್ನು ನಂಬಿಕೊಂಡು ಸಂದೀಪ ಕುಮಾರ್ ಅವರು ತನ್ನ ಕರ್ನಾಟಕ ಬ್ಯಾಂಕ್, ರಾಜರಾಜೇಶ್ವರಿ ನಗರ ಶಾಖೆಯ ಎಸ್.ಬಿ ಖಾತೆ ಯಿಂದ ಏ.07ರಂದು 62,102 ರೂ. ಏ.08ರಂದು 80,533 ರೂ., ಏ.13ರಂದು 2,64,706 ರೂ. ಸೇರಿದಂತೆ ಒಟ್ಟು 4,20,341 ರೂ. ಹಣವನ್ನು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ಇನ್ನು ಅಪರಿಚಿತ ವ್ಯಕ್ತಿ ಟೆಲಿಗ್ರಾಮ್ ಆ್ಯಪ್ ನಲ್ಲಿ ಟ್ರೇಂಡಿಂಗ್ ವ್ಯವಹಾರ ಎಂದು ನಂಬಿಸಿ ಒಟ್ಟು ರೂಪಾಯಿ 4,20,341 ಹಣವನ್ನು ಆನ್ ಲೈನ್ ಮುಖೇನ ಪಡೆದು ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.