ಉಳ್ಳಾಲ, ಏ 18 (DaijiworldNews/HR): ಚುನಾವಣೆಯಲ್ಲಿ ಕಾರ್ಯನಿರತ ಅಧಿಕಾರಿಯಾಗಿ ಒಂದು ಪಕ್ಷದ ಪರ ಪ್ರಚಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹರೇಕಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಚುನಾವಣಾಧಿಕಾರಿಗಳು ಅಮಾನತು ಮಾಡಿದ್ದಾರೆ.
ಹರೇಕಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಯಶವಂತ್ ಬೆಳ್ಚಪ್ಪಾಡ ಒಂದು ಪಕ್ಷದ ಪ್ರಚಾರ ನಡೆಸಿದ್ದಾರೆ ಎಂದು ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಇನ್ನು ವಾಯ್ಸ್ ಮೆಸೇಜ್ ಮೂಲಕ ಒಂದು ಪಕ್ಷದ ಪರ ಮತಯಾಚನೆ ಹಾಗೂ ಇನ್ನೊಂದು ಪಕ್ಷದ ವಿರುದ್ಧ ಹಾಗೂ ಮುಖಂಡರ ವಿರುದ್ಧ ಮಾತನಾಡಿರುವ ವಾಯ್ಸ್ ಕ್ಲಿಪ್ ಅನ್ನು ಸಾಕ್ಷಿಯಾಗಿ ಪರಿಗಣಿಸಿ ಚುನಾವಣಾಧಿಕಾರಿಗಳು ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.