ಉಡುಪಿ, ಏ 17 (DaijiworldNews/MS):ಸೋಲಾಯ್ತು ಅಂತಾ ಬೆಂಗಳೂರಿಗೆ ಹೋಗಿ ಕೂತಿಲ್ಲ. ಜನರ ನಡುವೆ ಹೋರಾಟ ಮಾಡುತ್ತ ಜನಪ್ರತಿನಿಧಿಗಳನ್ನು ಮೀರಿಸುವಂತೆ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ, ನನ್ನ ಕಡೆಯ ಚುನಾವಣೆಯಲ್ಲಿ ನನ್ನ ಕೈ ಹಿಡಿಯುವಿರಿ ಅನ್ನೋ ನಂಬಿಕೆ ಇದೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ಪೇಟೆಯಲ್ಲಿ ನಾಮ ಪತ್ರ ಸಲ್ಲಿಕೆಗೂ ಮುನ್ನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡಿದ ಅವರು ಶುದ್ಧ ಸಚ್ಛಾರಿತ್ರ್ಯ ರಾಜಕಾರಣಕ್ಕೆ ಈ ಬಾರಿಯಾದರೂ ಕಾಪು ಕ್ಷೇತ್ರದ ಜನತೆ ಬೆಲೆ ಕೊಟ್ಟು ನನ್ನನ್ನು ಆರಿಸುತ್ತಾರೆ ಎಂದರು.
“ನಾನು ಎದುರಾಳಿ ಅಭ್ಯರ್ಥಿಯ ಬಗ್ಗೆ ಮಾತನಾಡುವುದಿಲ್ಲ. ಎಸ್ ಡಿ ಪಿ ಐ ನ ಪಾತ್ರ ಏನು ಎಂದು ನನಗೆ ಗೊತ್ತಿಲ್ಲ. ಕಾಪು ಜನರಿಗೆ ಸಿಗಬೇಕಾದ ಸವಲತ್ತನ್ನು ಹೋರಾಟ ಮಾಡಿ ತರುತ್ತೇನೆ. ಕುಚ್ಚಿಗೆ ಅಕ್ಕಿ ಕೊಡುತ್ತೇನೆ ಎಂದು ವೇದಿಕೆಯಲ್ಲಿ ಘೋಷಣೆ ಮಾಡಿದರು. ಮುಖ್ಯಮಂತ್ರಿಯಿಂದ ಘೋಷಣೆ ಮಾಡಿಸಿ ಆಮೇಲೆ ಕ್ಷಮೆ ಕೇಳಿದರು. ನಾರಾಯಣ ಗುರು ನಿಗಮ ಕೇವಲ ಕಾಗದದಲ್ಲಿ ಮಾತ್ರ ಇದೆ . ನಾರಾಯಣ ಗುರು ನಿಗಮಕ್ಕೆ ಯಾವುದೇ ಹಣಕಾಸು ನೀಡಿಲ್ಲ . ನಿಗಮಕ್ಕೆ ನಾವು 250 ಕೋಟಿ ರೂಪಾಯಿ ತರುತ್ತೇವೆ. ಎಲ್ಲಾ ಸಮುದಾಯಗಳಿಗೆ ನಾವು ನಿಗಮ ಮಾಡಿ ನಾವು ಹಣ ತರುತ್ತೇವೆ. ಅಲ್ಪಸಂಖ್ಯಾತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರಂತರ ಕಿರುಕುಳ ನೀಡಿದೆ. ಸಮಸ್ಯೆ ಕ್ರಿಯೇಟ್ ಮಾಡಿದ್ದು ಯಾರು ಎಂದು ಎಲ್ಲರಿಗೂ ಗೊತ್ತಿದೆ . ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಶೆಟ್ಟರ್ - ಸವದಿ ಬಂದಿದ್ದಾರೆ ಬಿಜೆಪಿಯಲ್ಲಿ ಯಾರು ಉಳಿದಿದ್ದಾರೆ? ಕಾಂಗ್ರೆಸ್ ಉತ್ತರ ಕರ್ನಾಟಕವನ್ನು ಸ್ವೀಪ್ ಮಾಡುತ್ತದೆ. 10- 20 ದಿನದಲ್ಲಿ ಕರಾವಳಿಯನ್ನು ಕೂಡ ಕಾಂಗ್ರೆಸ್ ಸ್ವೀಪ್ ಮಾಡುತ್ತದೆ. ಜನಾರ್ದನ ಪೂಜಾರಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕೆ ಬರುತ್ತಾರೆ” ಎಂದವರು ತಿಳಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಸೊರಕೆ ಕಾಪು ಕ್ಷೇತ್ರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಕಾಪು ಜನಾರ್ಧನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆಯ ಮೂಲಕ ಕಾಪು ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುಂಚೆ ತನ್ನ ಶಾಸಕತ್ವದ ಅವಧಿಯಲ್ಲಿ ನಿರ್ಮಾಣ ವಾದ ಕಾಪು ತಾಲೂಕು ಸೌಧಕ್ಕೆ ಉದ್ದಾಂಡ ನಮಸ್ಕರಿಸಿ ಒಳಗೆ ನಡಿದಿದ್ದು ವಿಶೇಷವಾಗಿತ್ತು.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತಾನಾಡಿದ ಸೊರಕೆ, "ತನ್ನ ಶಾಸಕತ್ವದ ಅವಧಿಯಲ್ಲಿ ನಿರ್ಮಾಣವಾದ ತಾಲೂಕು ಸೌಧದಲ್ಲಿ ನಾಮಪತ್ರ ಸಲ್ಲಿಸುತ್ತಿರುವುದು ಬಹಳಷ್ಟು ಹೆಮ್ಮೆ ಮತ್ತುಖುಷಿಯನ್ನುಂಟು ಮಾಡಿದೆ. ಕಾಪು ಎಲ್ಲರನ್ನು ಕಾಪಾಡುವ ಊರು ಅಂತಾ ಹೆಸರು ಪಡೆದಿದೆ. ರಕ್ಷಣಾಪುರ ಅಂತಾ ಹೆಸರು ಪಡೆದಿರೋ ಊರಲ್ಲಿ ಶಾಂತಿನೆಲೆಯಾಗಬೇಕು..ಶಾಂತಿ ಇದ್ರೆ ಮಾತ್ರ ಪೂರಕ ಅಭಿವೃದ್ಧಿ ಸಾಧ್ಯ. ಅದಕ್ಕೆ ಪೂರಕ ವ್ಯವಸ್ಥೆ ಗಳು ಕಾಪುವಿನಲ್ಲಿ ಆಗಬೇಕಿದೆ.. ಕಾಪು ವಿನಲ್ಲಿ ಅಭಿವೃದ್ದಿಯಾಗಬಲ್ಲ ಎಲ್ಲಾ ಪೂರಕ ವಾತಾವರಣ ವನ್ನುಸೃಷ್ಟಿ ಮಾಡಬೇಕು. ಪ್ರವಾಸೋದ್ಯಮ ಕ್ಕೆ ಬಹಳಷ್ಟು ಅವಕಾಶವಿದೆ. ಕೈಗಾರಿಕಾ ವಲಯ ಸ್ಥಾಪನೆಯಾಗಬೇಕಿದೆ. ಹೆಜಮಾಡಿ ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ತಾಲೂಕು ಸೌಧಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಗಳು ಶೀಘ್ರ ನಿರ್ಮಾಯವಾಗಬೇಕಿದೆ. ಮಲ್ಲಿಗೆ , ಮಟ್ಟುಗುಳ್ಳಕ್ಕೆ ಬೇಕಾದ ಸಾಕಷ್ಟು ಉತ್ತೇಜನ, ಸುಸಜ್ಜಿತ ಕ್ರೀಡಾಂಗಣ ಹೀಗೆ ಕಾಪು ಸ್ವಂತ ಕಾಲಮೇಲೆ ನಿಲ್ಲುವಷ್ಟು ಅಭಿವೃದ್ಧಿ ಯನ್ನು ಮಾಡುವ ಕನಸು ನನ್ನದಾಗಿದೆ ಎಂದು ವಿನಯಕುಮಾರ್ ಸೊರಕೆ ಹೇಳಿದರು.