ಕುಂದಾಪುರ ನ 05 : ಬೈಂದೂರು ವಿಧಾನಸಭಾ ಕ್ಷೇತ್ರದ ಒಟ್ಟು 41 ಕಡೆ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಶಾಸಕ ಗೋಪಾಲ ಪೂಜಾರಿ ರವಿವಾರ ನೆರವೇರಿಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಹಳ್ನಾಡು ಗ್ರಾ.ಪಂ ಮಹಾಗಣಪತಿ ದೇವಸ್ಥಾನ ರಸ್ತೆ, ಮುಳ್ಳುಗುಡ್ಡೆ ಹಳ್ನಾಡು ರಸ್ತೆ, ಮೇರ್ಡರ ಮನೆಗೆ ತೆರಳುವ ರಸ್ತೆ, ಕಾವ್ರಾಡಿ ಗ್ರಾ.ಪಂ ನೆಲ್ಲಿಕಟ್ಟೆ ಕೂಡು ರಸ್ತೆ, ಸಾರ್ಕಲ್ ರಸ್ತೆ, ಬ್ರಹ್ಮಲಿಂಗೇಶ್ವರ ದೇವಸ್ಥಾನ ರಸ್ತೆ, ಕಲ್ಲರಬೈಲು ರಸ್ತೆ, ಮುಳ್ಳುಗುಡ್ಡೆ ಪ.ಜಾತಿ ಕಾಲನಿ ರಸ್ತೆ, ಕಂಡ್ಲೂರು ಸೌಕೂರು ರಸ್ತೆ, ಅಂಪಾರು ಗ್ರಾ.ಪಂ ಮೂಡುಬಗೆ ಹೊಸಿಮನೆ ರಸ್ತೆ, ವಾಲ್ತೂರು ಕುಣಿಗದ್ದೆ ರಸ್ತೆ, ಶಾನ್ಕಟ್ಟು ಮೇಲ್ಬೆಟ್ಟು ರಸ್ತೆ, ಗೊರಟೆ ರಸ್ತೆ, ಜಿಗಾರು ರಸ್ತೆ, ಜಿಗಾರುಗುಡ್ಡೆ ರಸ್ತೆ, ಗುಡಿಬೆಟ್ಟು ನಂದಿಕೇಶ್ವರ ದೇವಸ್ಥಾನ ರಸ್ತೆ, ಮೇಲ್ಬೈಲು ರಸ್ತೆ, ಬಂಗ್ಲೆಗುಡ್ಡೆ ಮತ್ತು ಕಂಸಾಡಿ ರಸ್ತೆ, ತೆಂಕಬೆಟ್ಟು ಕುಂಬಾರಬೆಟ್ಟು ರಸ್ತೆ, ಕರ್ಕುಂಜೆ ಗ್ರಾಮದ ಕೊಲ್ಲೂರು ಮುಖ್ಯರಸ್ತೆಯಿಂದ ಕೊರಬೈಲು ಮೂಲಕ ಆಜ್ರಿ ರಸ್ತೆಗೆ ಸಂಪರ್ಕ ರಸ್ತೆ, ಮಾವಿನಕಟ್ಟೆ ರಸ್ತೆ, ಜೆಡ್ಡಿನಕೊಡ್ಲು ರಸ್ತೆ, ಕೌಜೂರು ರಸ್ತೆ, ಹಿಲ್ಕೋಡು ರಸ್ತೆ, ಗುಲ್ವಾಡಿ ಗ್ರಾ.ಪಂ ಸೌಕೂರು ಚಿಕ್ಕಪೇಟೆ ರಸ್ತೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ, ಕಂಬಳಗದ್ದೆ ರಸ್ತೆ, ಕೊಡ್ಲಾಡಿ ಹೊಲದಮನೆಯಲ್ಲಿ 3.95 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಸೇರಿದಂತೆ ಒಟ್ಟು40ಕಡೆ ಒಟ್ಟು 11 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಗೋಪಾಲ ಪೂಜಾರಿ ಬೈಂದೂರು ಕ್ಷೇತ್ರಕ್ಕೆ ನಾನು ಶಾಸಕನಾದ ಮೇಲೆ ಬಹಳಷ್ಟು ಸಾಧನೆಗಳನ್ನ ಕಾಮಗಾರಿಗಳನ್ನ ನಡೆಸಿದ್ದೇನೆ. ಈ ಹಿಂದೆ ಶಾಸಕರಾಗಿದ್ದವರೂ ಈ ಕ್ಷೇತ್ರದ ಅಭಿವೃದ್ಧಿಗೆ ಎಳ್ಳಷ್ಟು ಗಮನ ನೀಡಿಲ್ಲ. ನನ್ ಅವಧಿಯಲ್ಲಿ ಬಹಳಷ್ಟು ಕಾಮಗಾರಿಗಳು ನಡೆದಿದೆ. ಕ್ಷೇತ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ. ಈ ನನ್ನ ಕೆಲಸಕ್ಕೆ ನಾನು ಮುಂದೆ ಬರುವ ಚುನಾವಣೆಯಲ್ಲಿ ನಿಮ್ಮ ಒಂದು ಮತದ ಕೇಳುತ್ತಿದ್ದೇನೆ ಎಂದು ಹೇಳಿದರು.