ಕಾಸರಗೋಡು, ಏ 16 (DaijiworldNews/SM): ಬೀದಿ ದೀಪ ದುರಸ್ಥಿ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕನೋರ್ವ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಕುಂಬಳೆ ಶಿರಿಯದ ಮುಹಮ್ಮದ್ ಹನೀಫ್(40) ಮೃತಪಟ್ಟವರು. ವಿದ್ಯುತ್ ಕಂಬಕ್ಕೆ ಹತ್ತಿ ದುರಸ್ತಿಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಪರಿಸರ ವಾಸಿಗಳು ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು.
ಪ್ರಕರಣದ ಕುರಿತಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.