ಉಳ್ಳಾಲ, ಏ 16 (DaijiworldNews/SM): ಬೌದ್ಧ ಧರ್ಮಗುರು ವಿಶ್ವಕ್ಕೆ ಶಾಂತಿಯನ್ನು ಸಾರುವ 14ನೇ ದಲಾಯಿ ಲಾಮ ಕುರಿತಾದ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಅಶ್ಲೀಲವಾಗಿ ಚಿತ್ರಿಸುತ್ತಿರುವುದನ್ನು ಖಂಡಿಸುತ್ತೇವೆ, ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ ಅನ್ನು ಹಾಕುವವರು ತಕ್ಷಣ ಅಳಿಸಿ ಕ್ಷಮೆಯಾಚಿಸಬೇಕು ಎಂದು ಟಿಬೆಟ್ ಮೂಲದ ವೈದ್ಯ ವಿದ್ಯಾರ್ಥಿ ಟೆನ್ಝಿನ್ ಒತ್ತಾಯಿಸಿದರು.
ಟಿಬೆಟಿಯನ್ ಧರ್ಮಗರು ದಲಾೈಲಾಮ ಅವರು ಬಾಲಕೊಬ್ಬನಿಗೆ ಆಶೀರ್ವಾದ ಮಾಡುವಾಗ ಮುತ್ತು ನೀಡಿದ ವಿಚಾರದಲ್ಲಿ ಸಾಮಾಜಿಕ ಜಾಲತಾಣ ಸೇರಿದಂತೆ ವಿದೇಶಗಳಲ್ಲಿ ಧರ್ಮಗುರುವಿನ ವಿಡಿಯೋ ವೈರಲ್ ಮಾಡಿ ಅವಹೇಳನ ಮಾಡಿ ಅವರ ಧಾರ್ಮಿಕ ನಂಬಿಕೆಗಳಿಗೆ ದಕ್ಕೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ದೇರಳಕಟ್ಟೆಯ ಪ್ರದೇಶದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಟಿಬೆಟಿಯನ್ ವಿದ್ಯಾರ್ಥಿಗಳು ಕುತ್ತಾರು ನಿತ್ಯಾನಂದ ನಗರ ಬಳಿ ಪ್ರತಿಭಟನೆ ನಡೆಸಿದರು.
ಹಳೆಯದಾದ ವೀಡಿಯೋದಲ್ಲಿನ ತುಣುಕು ತೆಗೆದು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸಿ ಅವಮಾನಿಸಲಾಗುತ್ತಿದೆ. ಹಿರಿಯರು ಮಕ್ಕಳಿಗೆ ಮುತ್ತು ಕೊಡುವ ಜುಲೇಧಾ ಅನ್ನುವ ಪದ್ಧತಿಯೇ ಇದೆ. ಅದೊಂದು ಭಾವನಾತ್ಮಕ ವಿಚಾರವಾಗಿದ್ದು, ಇದನ್ನು ಅನ್ಮೋಲ್ ಚೌಧರಿ, ಸಾರ್ಯರಂತಹ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ನೋವುಂಟು ಮಾಡುತ್ತದೆ ಎಂದರು.
ವಿದ್ಯಾರ್ಥಿ ವಿನ್ಝೀನ್ ಮಾತನಾಡಿ, ಹಳೇಯ ವೀಡಿಯೋವನ್ನು ಹರಿಯಬಿಟ್ಟು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಲಾಗುತ್ತಿದೆ. ಮಗುವೇ ಆಶೀರ್ವಾದವನ್ನು ಕೇಳಿ ಪಡೆದು ನಂತರ ಖುಷಿಯಿಂದ ಪ್ರತಿಕ್ರಿಯಿಸಿದ ವೀಡಿಯೋವನ್ನು ತುಂಡರಿಸಲಾಗಿದೆ. ಕೃತ್ಯದಿಂದ ಮಗುವನ್ನು ಸಂತ್ರಸ್ತರ ರೀತಿಯಲ್ಲಿ ಪ್ರದರ್ಶಿಸುವ ಕೆಲಸವಾಗುತ್ತಿದೆ. ಸರಿಯಾದ ಜ್ಞಾನವಿಲ್ಲದೆ ಸೆಲೆಬ್ರಿಟಿಗಳು ಇಂತಹ ಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ತಶಿ, ತನ್ಝಿನ್, ವಾಂಗ್ಮೊ, ರಿನ್ಝಿನ್, ಲೊಂಡೆನ್ ಸೇರಿದಂತ ವಿದ್ಯಾರ್ಥಗಳು ಪ್ರತಭಟನೆಯಲ್ಲಿ ಭಾಗವಹಿಸಿದರು.