ಉಳ್ಳಾಲ, ಏ 15 (DaijiworldNews/MS): ತಾಲೂಕಿನ ಪಜೀರು ಗ್ರಾಮದಲ್ಲಿ ಚಿರತೆಯೊಂದು ಕಂಡುಬಂದಿದ್ದು, ಈ ಕುರಿತು ಅರಣ್ಯ ಇಲಾಖೆಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಚಿರತೆ ಹಿಡಿಯಲು ಗ್ರಾಮದಲ್ಲಿ ಒಂದು ಬೋನು ಇಡಲಾಗಿದೆ.
ಪಜೀರು ಗ್ರಾಮದ ಅಂಗಡಿಕೆರೆ, ಗುಂಪಕಲ್ಲು, ಉಜ್ಜೊಟ್ಟು, ಮಲಾರ್ ಪರಿಸರದಲ್ಲಿ ಎ.13 ರಂದು ಸಂಜೆ ಹೊತ್ತಿಗೆ ಚಿರತೆ ಮರಿಗಳನ್ನು ಕಂಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ದೂರಿಕೊಂಡಿದ್ದರು. ಇದರಿಂದ ಆತಂಕಗೊಂಡ ಸ್ಥಳೀಯರು, ಮಕ್ಕಳು ,ದೊಡ್ಡವರು ಪ್ರದೇಶದಲ್ಲಿ ಸುತ್ತಾಡುತ್ತಿರುತ್ತಾರೆ. ಚಿರತೆ ಆಗಿದ್ದಲ್ಲಿ ಯಾವ ಸಮಯದಲ್ಲಿ ಬೇಕಾದರೂ ದಾಳಿ ಮಾಡಬಹುದು. ಈ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ರಕ್ಷಣೆ ಒದಗಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರಿಕೊಂಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಒಂದು ಬೋನನ್ನು ಇಟ್ಟಿದ್ದಾರೆ .
'ಬೇರೆ ತಳಿಯ ಬೆಕ್ಕೂ ಆಗಿರಬಹುದು':
"ವಿವಿಧ ತಳಿಯ ಬೆಕ್ಕುಗಳು ಚಿರತೆಯಂತೆ ಕಂಡುಬರುತ್ತದೆ. ಪಜೀರು ಭಾಗದಲ್ಲಿ ಈವರೆಗೆ ಚಿರತೆಗಳು ಬಂದಿರುವ ದಾಖಲೆಗಳು ಇಲ್ಲ. ಸ್ಥಳದಲ್ಲಿ ಹೆಜ್ಜೆ ಗುರುತುಗಳು ಚಿರತೆಯಂತೆ ಗೋಚರಿಸುತ್ತದೆ, ಆದರೆ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಬೋನನ್ನು ಇಟ್ಟಿದ್ದೇವೆ. ಸ್ಥಳದಲ್ಲಿ ನಾಯಿಯನ್ನೂ ಕಟ್ಟಲಾಗಿದೆ". ಮಹಾಬಲ ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿ.