ಮಂಗಳೂರು ನ5 : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ರಾತ್ರಿ ಅಕ್ರಮ ಚಿನ್ನಾಭರಣ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ. ಟಾಯ್ಲೆಟ್ನಲ್ಲಿ ಬಚ್ಚಿಡಲಾಗಿದ್ದ 34.17 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ದುಬೈ ನಿಂದ ಪ್ರಯಾಣಿಕನೊಬ್ಬ ಅಕ್ರಮವಾಗಿ ಚಿನ್ನವನ್ನು ತಂದು ನಿಲ್ದಾಣದ ಇಮಿಗ್ರೇಶನ್ ಕೌಂಟರ್ ಬಳಿಯ ಶೌಚಾಲಯದಲ್ಲಿ ಬಚ್ಚಿಟ್ಟಿದ್ದ.ಬಳಿಕ ಸ್ವಚ್ಚತಾ ಸಿಬ್ಬಂದಿಯ ಮೂಲಕ ವಿಮಾನ ನಿಲ್ದಾನದ ಮೂಲಕ ಹೊರಗೆ ಸಾಗಿಸುವ ಉದ್ದೇಶ ಈತನದಾಗಿತ್ತು. ಆದರೆ ಖಚಿತ ಮಾಹಿತಿ ಪಡೆದ ಡಿಎರ್ ಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ವ್ಯಾಪಕ ಶೋಧ ನಡೆಸಿದಾಗ ಟಾಯ್ಲೆಟ್ನಲ್ಲಿ ಚಿನ್ನ ಪತ್ತೆಯಾಗಿದೆ.
ದುಬೈ ನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕ ಸ್ಪಷ್ಟ ಗುರುತು ಪತ್ತೆಯಾಗಿಲ್ಲ.