ಸುಳ್ಯ, ಏ 13 (DaijiworldNews/HR): ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಸಂತೋಷ್ ರೈ ಗಳ ತೋಟದ ಕೆರೆಗೆ ಬುಧವಾರ ರಾತ್ರಿ ಬಿದ್ದ ಕಾಡಾನೆಯನ್ನು ಮೇಲೆತ್ತುವಲ್ಲಿ ಅರಣ್ಯ ಇಲಾಖೆ ಹಾಗೂ ಊರವರು ಯಶಸ್ವಿಯಾಗಿದ್ದಾರೆ.

ಕರೆಯ ಒಂದು ಭಾಗದಲ್ಲಿ ಅಗೆದು ದೊಡ್ಡ ಗಾತ್ರದ ಎರಡು ಆನೆಗಳು ಮೇಲಕ್ಕೆ ಬಂದು ಕಾಡು ಸೇರಿದ್ದು, ಒಂದು ಮರಿಯಾನೆ ಕಷ್ಟದಲ್ಲೇ ಅದೇ ದಾರಿಯಲ್ಲಿ ಮೇಲತ್ತಿತು. ಬಳಿಕ ಒಂದು ಮರಿಯಾನೆ ಕೆರೆಯಲ್ಲೇ ಬಾಕಿಯಾಯಿತು.ಅದು ಸುಲಭದಲ್ಲಿ ಮೇಲಕ್ಕೆ ಬರಲಿಲ್ಲ. ಅದರ ಕತ್ತಿಗೆ ಹಗ್ಗ ಹಾಕಿ ಮೇಲೆತ್ತುವ ಪ್ರಯತ್ನ ನಡೆಯಿತು.
ಇನ್ನು ಕೆಲ ಹೊತ್ತು ಕಾರ್ಯಾಚಾರಣೆ ಬಳಿಕ ಅರಣ್ಯ ಇಲಾಖಾ ಸಿಬ್ಬಂದಿಗಳು ಮತ್ತು ಊರಿನ ಕೆಲ ಯುವಕರು ಕೆರೆಗೆ ಇಳಿದು ಆನೆ ಮರಿಯನ್ನು ದೂಡಿ ಮೇಲತ್ತಿಸಿದರು. ಆದರೆ ಆನೆ ಸುಸ್ತಾಗಿದ್ದು ಸರಿಯಾಗಿ ನಡೆದಾಡಲೂ ಸಾಧ್ಯವಾಗದಿದ್ದರಿಂದ ಅದನ್ನು ದೂಡಿಕೊಂಡು ಕಾಡಿಗೆ ಸಾಗಿಸಲಾಯಿತು.