ಮಂಗಳೂರು, ಏ 11 (DaijiworldNews/HR): ಮಂಗಳೂರು "ಬೇಕಿಂಗ್ ಕಂಪನಿ"ಯ ಮಾಲಕಿ, 28 ವರ್ಷದ ಯುವತಿ ಒಶಿನ್ ಪಿರೇರಾ ಥೈಲ್ಯಾಂಡ್ನಲ್ಲಿ ಮೃತಪಟ್ಟ ಘಟನೆ ಎ.11ರ ಮಂಗಳವಾರ ನಡೆದಿದೆ.
ಮೃತ ಒಶಿನ್ ಪಿರೇರಾ ಅವರು ದಿ.ಆಸ್ಕರ್ ಪಿರೇರಾ ಮತ್ತು ಶ್ರೀಮತಿ ಒಲಿವಿಯಾ ಪಿರೇರಾ ಅವರ ಪುತ್ರಿಯಾಗಿದ್ದಾರೆ.
ಥೈಲ್ಯಾಂಡ್ ಪ್ರವಾಸದಲ್ಲಿದ್ದಾಗ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ದೊರಕಿದೆ. ಇವರ ಕುಟುಂಬವು ನಗರದ ಹಂಪನಕಟ್ಟೆಯಲ್ಲಿ ಅತ್ಯಂತ ಪ್ರಸಿದ್ಧವಾದ 'ಪಿರೇರಾ ರೆಸ್ಟೋರೆಂಟ್' ಅನ್ನು ಹೊಂದಿದೆ.
ಮೃತರು, ತಾಯಿ, ಸಹೋದರ ಓಸ್ಬೋರ್ನ್ ಪಿರೇರಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.