ಸುಳ್ಯ, ಏ 11(DaijiworldNews/MS): ತೆಂಗಿನ ಕಾಯಿ ಕೀಳುತ್ತಿದ್ದ ಸಂದರ್ಭ ಕಾರ್ಮಿಕನೋರ್ವ ಮರದಿಂದ ಬಿದ್ದು ಮೃತಪಟ್ಟ ಘಟನೆ ಕೆಮ್ರಾಜೆ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಕೆಮ್ರಾಜೆ ಗ್ರಾಮದ ನಾರ್ಣಕಜೆ ದಿ. ಕುಂಇ~ ಎಂಬವರ ಪುತ್ರ ಹರೀಶ್( 29) ಎಂದು ಗುರುತಿಸಲಾಗಿದೆ.
ನೆಲ್ಲೂರು ನಾರ್ಣಕಜೆ ಬಳಿ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.