ಉಡುಪಿ, ಏ 11 (DaijiworldNews/HR): ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿ ಎರಡು ವಾರ ಕಳೆದರೂ ಇನ್ನೂ ಕೆಲವು ಕಡೆಗಳಲ್ಲಿ ರಾಜಕೀಯ ಪಕ್ಷದ ನಾಯಕರುಗಳ ಪೋಟೋಗಳಿಗೆ ಮಸಿ ಬಿದ್ದಿಲ್ಲ.
ಉಡುಪಿ ತಾಲ್ಲೂಕಿನ ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಜಾಲುವಿನ ಪೇತ್ರಿ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರ ಗೋಡೆಯಲ್ಲಿ ರಾಜಕೀಯ ಪಕ್ಷದ ನಾಯಕರ ಪೋಟೋ ಮತ್ತು ಚುನಾವಣಾ ಪ್ರಚಾರದ ಬರಹಗಳು ಇದ್ದು ಇವುಗಳಿಗೆ ಇನ್ನೂ ಕೂಡಾ ಮಸಿ ಬಳಿದಿಲ್ಲ. ಇದರ ಪಕ್ಕದಲ್ಲೇ ಕುಂಜಾಲು ಮುಖ್ಯ ರಸ್ತೆಯಿಂದ ಅಡ್ನೀಲು ಲಕ್ಷ್ಮೀ ಹಾಂಡ್ತಿ ಮನೆಗೆ ಹೋಗುವ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ನಾಮಫಲಕ ಇದ್ದು ಇದರಲ್ಲಿ ಶಾಸಕ ರಘುಪತಿ ಭಟ್ ಅವರ ಹೆಸರು ಇದ್ದು ಇದಕ್ಕೆ ಕೂಡಾ ಮುಚ್ಚುಗಡೆ ಭಾಗ್ಯ ದೊರಕಿಲ್ಲ.
ಇನ್ನು ಚಾಂತಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಾಂತಾರು ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ದುರಸ್ತಿ ಎಂಬ ನಾಮಫಲಕ ಇದ್ದು ಇದರಲ್ಲಿ ಕೂಡಾ ಶಾಸಕ ರಘುಪತಿ ಭಟ್ ಹೆಸರಿದ್ದು ಈ ಬೋರ್ಡ್ ಅನ್ನು ಕೂಡಾ ಅಧಿಕಾರಿಗಳು ಈವರೆಗೆ ತೆರವು ಮಾಡಿಲ್ಲ.
ಈ ಎರಡೂ ಪ್ರಕರಣಗಳು ಕೂಡಾ ನೀತಿಸಂಹಿತೆಯ ಸ್ಷಷ್ಟ ಉಲ್ಲಂಘನೆ ಯಾಗಿದ್ದು ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.