ಮಂಗಳೂರು, ಏ.09 (DaijiworldNews/SM): ಈ ಭಾರಿಯ ವಿಧಾನ ಸಭಾ ಚುನಾವಣೆಯನ್ನು ಜನ ಎದುರು ನೋಡ್ತಾ ಇದ್ದಾರೆ. ಕರ್ನಾಟಕಕ್ಕೆ ಶಾಪ ಆಗಿರುವ ೪೦% ಸರ್ಕಾರವನ್ನು ಯಾವಾಗ ಬದಲಾವಣೆ ಮಾಡ್ತೇವೆ ಅನ್ನುವ ಆತುರ ದಲ್ಲಿ ಜನ ಇದ್ದಾರೆ ಎಂದು ಮಂಗಳೂರಿನಲ್ಲಿ ರಾಜ್ಯ ಸಭಾ ಸದಸ್ಯರಾದ (MP) ಎಲ್.ಎನ್.ಹನುಮಂತಯ್ಯ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರ ರಾಜ್ಯದಲ್ಲಿ ಒಂದು ಭ್ರಷ್ಟ ಆಡಳಿತವನ್ನು ಕೊಟ್ಟಿದೆ. ಚುನಾವಣೆ ಹತ್ತಿರ ಬಂದ ನಂತರ ಬಂದ ಯೋಜನೆ ಸಂಪೂರ್ಣ ಗೊಂದಲದ ರಿಸರ್ವೇಷನ್ ಪಾಲಿಸಿಗಳಾಗಿವೆ. ಎಲ್ಲರ ಮೂಗಿಗೆ ತುಪ್ಪ ಸವರಿ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿದ್ದಾರೆ. ಆದ್ರೆ ಜನ ಈ ರಿಸರ್ವೇಷನ್ ಕೇಳಿದವರೇ ಇದನ್ನು ವಿರೋಧ ಮಾಡ್ತಾ ಇದ್ದಾರೆ. ಸರ್ಕಾರದ ಸ್ಪಷ್ಟತೆ ಇಲ್ಲದ ಮೀಸಲಾತಿ ಕಾನೂ ಒಪ್ಪಲ್ಲ ಎಂದು ವಿರೋಧಿಸಿದ್ದಾರೆ ಎಂದರು.
ಆದರಿಂದ ಮೇ ೧೦ರಂದು ಜನ ಕರ್ನಾಟಕದಲ್ಲಿ ಒಂದು ನಿರ್ಧಿಷ್ಟವಾದ ಮತ್ತು ಪೂರ್ಣ ಬಹುಮತದ ಆಡಳಿತ ತರ್ತಾರೆ. ರಾಜ್ಯದಲ್ಲಿ ಬಿಜೆಪಿ ಅನೈತಿಕ ಮಾರ್ಗದಲ್ಲಿ ಆಡಳಿತ ಹಿಡಿಯುವ ಹುನ್ನಾರದಲ್ಲಿದೆ. ಈ ಹಿಂದೆ ಅದೇ ರೀತಿ ಚುನಾವಣೆ ಬಳಿಕ ಶಾಸಕರ ಖರೀದಿ ಮಾಡಿದ್ರು ಈಗಾ ಚುನಾವಣೆಗೂ ಮುನ್ನ ಆ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.