ಬೆಳ್ತಂಗಡಿ/ಮಂಗಳೂರು, ಏ 09 (DaijiworldNews/HR): ಪಡಂಗಡಿ ಗ್ರಾಮದ ಬದ್ಯಾರು ಸಮೀಪದ ಕಳೆಂಜಿರೋಡಿ ಜೊಬೆಲ್ಲಾ ಫೆಲಿಕ್ಸ್ ಅವರ ಮನೆಗೆ ಶುಕ್ರವಾರ ರಾತ್ರಿ ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾಗಿರುವ ಘಟನೆ ನಡೆದಿದೆ.
ಫೆಲಿಕ್ಸ್ ಅವರ ಪುತ್ರ ನವೀನ ಹಾಗೂ ಆತನ ಪತ್ನಿ, ಇಬ್ಬರು ಮಕ್ಕಳು ಮನೆಯಲ್ಲಿ ವಾಸವಾಗಿದ್ದರು. ಆದರೆ ಪೂಜೆ ನಿಮಿತ್ತ ಅವರೆಲ್ಲರೂ ಚರ್ಚ್ಗೆ ತೆರಳಿದ್ದರಿಂದ ಜೀವಹಾನಿ ತಪ್ಪಿದೆ.
ಇನ್ನು ಘಟನಾ ಸ್ಥಳಕ್ಕೆ ಪಂಚಾಯತ್ ಸಿಬಂದಿ ಭೇಟಿ ನೀಡಿದ್ಧಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಏಪ್ರಿಲ್ 9ರಂದು ಬೆಳಗ್ಗೆವರೆಗೆ ಎಲ್ಲೋ ಅಲರ್ಟ್ ಘೋಷಿಸಿದೆ.
ಜಿಲ್ಲೆಯ ಹಲವೆಡೆ ಶನಿವಾರ ಬೆಳಗ್ಗೆಯಿಂದ ಮೊಡದಿಂದ ಕೂಡಿದ ವಾತಾವರಣ ಇತ್ತು. ಉರಿ ಸೆಕೆ ಹೆಚ್ಚಿತ್ತು. ಮಂಗಳೂರಿನಲ್ಲಿ 34.2 ಡಿ.ಸೆ. ಗರಿಷ್ಠ ಮತ್ತು 23.8 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.