ಮಂಗಳೂರು, ಏ 07 (DaijiworldNews/HR): ಕ್ರೈಸ್ತರ ಪವಿತ್ರ ಹಬ್ಬಗಳಲ್ಲಿ ಒಂದಾದ ಗುಡ್ಫ್ರೈಡೆ ಅಂಗವಾಗಿ ಇಂದು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ತಮ್ಮ ತಮ್ಮ ಚರ್ಚ್ಗಳಿಗೆ ಆಗಮಿಸುತ್ತಿದ್ದಾರೆ.
ಕ್ರೈಸ್ತರ ಪವಿತ್ರ ದಿನ ಗುಡ್ ಫ್ರೈಡೆಯಂದು ಜಿಲ್ಲೆಯ ಎಲ್ಲಾ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯಲಿದ್ದು, ಯೇಸು ಕ್ರಿಸ್ತ ಬಂಧನಕ್ಕೆ ಒಳಗಾಗುವುದರಿಂದ ಹಿಡಿದು ಶಿಲುಬೆಗೆ ಏರುವವರೆಗಿನ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ, ಪ್ರತಿಯೊಂದು ಭಾಗವನ್ನೂ ಅವಲೋಕಿಸುತ್ತಾ ಪ್ರಾರ್ಥಿಸುವ ಮೂಲಕ ಶುಕ್ರವಾರ ದಿವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಶುಭ ಶುಕ್ರವಾರದ (ಗುಡ್ಫ್ರೈಡೆ) ಮುಖ್ಯ ಸೇವೆಯು ಚರ್ಚ್ಗಳಲ್ಲಿ ಸಂಜೆ 4 ಗಂಟೆಯ ನಂತರ ಪ್ರಾರಂಭವಾಗುತ್ತದೆ.
ಇನ್ನು ಯೇಸುವನ್ನು ಯೆಹೂದಿಗಳು ಅಪಹಾಸ್ಯಕ್ಕೆ ಗುರಿ ಮಾಡಿ ಶಿಲುಬೆಗೇರಿಸಿ ನಿರ್ದಯವಾಗಿ ಹತ್ಯೆಗೈದಿದ್ದು, ನಿರಪರಾಧಿ ಯೇಸು ಶಿಲುಬೆ ಮೇಲೆ ಸುರಿಸಿದ ರಕ್ತದಿಂದ ಮಾನವನ ಪಾಪಕ್ಕೆ ಪರಿಹಾರವಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಗುಡ್ಫ್ರೈಡೆ ಆಚರಿಸಲಾಗುತ್ತದೆ.