ಉಡುಪಿ, ಏ 07 (DaijiworldNews/MS): ಉಡುಪಿ ಜಿಲ್ಲೆಯ ವಿವಿಧೆಡೆ ಗುರುವಾರ ಚುನಾ ವಣೆ ಪೂರ್ವಭಾವಿಯಾಗಿ ಪ್ಯಾರಾ ಮಿಲಿಟರಿ ಪಡೆ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿ ಜಿಲ್ಲೆಯ ವಿವಿಧೆಡೆ ಪಥಸಂಚಲನ ನಡೆಸಿದರು.
ಉಡುಪಿ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಲ್ಪೆ, ಕಾಪು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕಾಪು ಪ್ರದೇಶ, ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಬೈಲೂರು ಹಾಗೂ ಕಾರ್ಕಳ ಪೇಟೆ, ಬೈಂದೂರು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಶಿರೂರು ಭಾಗ ಗಳಲ್ಲಿ ಪಥಸಂಚಲನ ಮಾಡಲಾಯಿತು.
ಸಾರ್ವಜನಿಕರಲ್ಲಿ ಆತ್ಮಸ್ಥೆರ್ಯ, ಧೈರ್ಯ ತುಂಬಿಸಲು ಈ ಪಥಸಂಚಲನ ನಡೆಸಲಾಗಿದೆ. ಮುಂದಿನ ದಿನದಲ್ಲಿ ವಿವಿಧೆಡೆ ಪಥಸಂಚಲನ ನಡೆಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ಗಳಲ್ಲಿ ಪೊಲೀಸರು ತಪಾಸಣೆ ಕಾರ್ಯ ಮುಂದುವರಿಸಿದ್ದಾರೆ.