ಕುಂದಾಪುರ, ಏ.05 (DaijiworldNews/SM): ಬೈಕೊಂದು ರಸ್ತೆ ದಾಟುತಿದ್ದ ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಕುಂದಾಪುರ ತಾಲೂಕಿನ ವಡೇರಹೋಬಲಿ ಗ್ರಾಮದ ನೆಹರೂ ಮೈದಾನದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಹೊನ್ನೂರು ಎಂದು ಗುರುತಿಸಲಾಗಿದೆ. ರಾತ್ರಿ 8:30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ದಾಟುತಿದ್ದ ಅವರಿಗೆ ಕುಂದಾಪುರದಿಂದ ಉಡುಪಿಯತ್ತ ವೇಗವಾಗಿ ಸಾಗುತಿದ್ದ ಬೆಬ್ ಡಿಕ್ಕಿ ಹೊಡೆದಿತ್ತು. ಇದರಿಂದ ರಸ್ತೆಗೆ ಎಸೆಯಲ್ಪಟ್ಟು ತಲೆ, ಹೊಟ್ಟೆಗೆ ಗಂಭೀರವಾಗಿ ಗಾಯಗೊಂಡ ಹೊನ್ನೂರು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು.
ಈ ಅಪಘಾತದಲ್ಲಿ ಬೈಕ್ನಲ್ಲಿದ್ದ ಅವಿನಾಶ್ ಪೂಜಾರಿ ಹಾಗೂ ಸಂದೀಪ್ ಪೂಜಾರಿ ಅವರೂ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.