ಕಾಸರಗೋಡು, ಏ 05 (DaijiworldNews/MS): ರಕ್ಷಿತಾರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರ ಭಯವನ್ನು ಹೋಗಲಾಡಿಸಲು ಹಾಗೂ ದಾಳಿ ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇರಳ ಅರಣ್ಯ ಖಾತೆ ಸಚಿವ ಎ .ಕೆ ಶಶೀ೦ದ್ರನ್ ಹೇಳಿದರ ಮಂಗಳವಾರ ಕುತ್ತಿಕೋಲ್ ನ ಸೋಪಾನಂ ಸಭಾಂಗಣದಲ್ಲಿ ನಡೆದ ಅರಣ್ಯ ಸ್ನೇಹಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅರಣ್ಯ ಒತ್ತುವರಿ, ಕಾಡುಹಂದಿ, ಮಂಗಗಳ ಕಾಟ, ಅರಣ್ಯ ಭೂಮಿಯಲ್ಲಿ ರಸ್ತೆ ನವೀಕರಣ, ಕುಡಿಯುವ ನೀರಿನ ಪೈಪ್ಲೈನ್ ಹಾಕಲು ಅನುಮತಿ, ಪರಿಹಾರ ಸೇರಿದಂತೆ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಎತ್ತಿರುವ ಎಲ್ಲ ಸಮಸ್ಯೆಗಳ ಕುರಿತು 15 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ವನ್ಯಜೀವಿ ದಾಳಿಗೆ ತುತ್ತಾಗುವವರಿಗೆ, ಮೃತರ ಕುಟುಂಬಕ್ಕೆ ನೀಡುವ ಪರಿಹಾರ ಧನ ಹೆಚ್ಚಳ, ಅರಣ್ಯ ಪ್ರದೇಶದ ಸಮೀಪ ಪರಿಸರ ಪ್ರವಾಸೋದ್ಯಮ ಯೋಜನೆ, ಅರಣ್ಯ ಬಲ್ಲವರನ್ನು ವೀಕ್ಷಕರನ್ನಾಗಿ ನೇಮಿಸಲಾಗುವುದು ಎಂದು ಸಚಿವ ಎ.ಕೆ.ಸಶೀಂದ್ರನ್ ಹೇಳಿದರು. ಡಿಸೆಂಬರ್ 2022 ರವರೆಗಿನ ವಾಚರ್ಗಳ ಬಾಕಿ ವೇತನವನ್ನು ಪಾವತಿಸಲಾಗಿದೆ. 2023ರ ಜನವರಿ ಮತ್ತು ಮಾರ್ಚ್ ತಿಂಗಳಿಗೆ ಶೀಘ್ರವೇ ನೀಡಲಾಗುವುದು ಎಂದು ತಿಳಿಸಿದರು. ಪರಿಹಾರಕ್ಕಾಗಿ ರಾಜ್ಯದಲ್ಲಿ 50 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಕಾಸರಗೋಡು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ 43 ಬೀಟ್ ಅಧಿಕಾರಿಗಳನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಬಂದರು ಸಚಿವಅಹ್ಮದ್ ದೇವರ್ ಕೋವಿಲ್ ವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಮತ್ತು ಕಾಞಂಗಾಡ್ ಸಬ್ ಕಲೆಕ್ಟರ್ ಸುಫಿಯಾನ್ ಅಹಮ್ಮದ್ ಮುಖ್ಯ ಅತಿಥಿಗಳಾಗಿದ್ದರು.
ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುರಳಿ ಪಯ್ಯಂಗಾನಂ (ಕುತ್ತಿಕೋಲ್ ), ಜೆ.ಎಸ್.ಸೋಮಶೇಖರ್ ( ಎಣ್ಮಕಜೆ), ಜೀನ್ ಲವೀನ್ ಮೊಂತೆರೊ (ಮಂಜೇಶ್ವರ), ಎಸ್.ಭಾರತಿ (ವರ್ಕಾಡಿ), ಎಂ.ಧನ್ಯ (ಬೇಡಡ್ಕ ) ಮತ್ತು ಟಿ.ಕೆ.ನಾರಾಯಣನ್.(ಕಲ್ಲರ), ಗಿರಿಜಾ ಮೋಹನ್ (ವೆಸ್ಟ್ ಎಳೇರಿ ), ಎಚ್.ಮುರಳಿ (ಕುತ್ತಿಕೋಲ್ ), ರಾಜು ಕಟ್ಟಕ್ಕಯಂ (ಬಳಾಲ್), ಪಿ.ವಿ.ಮಿನಿ (ಮುಳಿಯಾರ್), ಅಬ್ದುಲ್ಲ (ಉಪಾಧ್ಯಕ್ಷ ದೇಲಂಪಾಡಿ), ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಯಪ್ರಸಾದ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್.ಜಿ. ಕೃಷ್ಣನ್, ಉತ್ತರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ದೀಪಾ, ವಿಭಾಗೀಯ ಅರಣ್ಯಾಧಿಕಾರಿ ಪಿ.ಬಿಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೀವನ್, ಫ್ಲೈಯಿಂಗ್ ಸ್ಕ್ವಾಡ್ ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಕೆ.ರಾಮನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಧನೇಶ್ ಕುಮಾರ್, ಡಿಎಫ್ಒ ಅಜಿತ್ ಕೆ.ರಾಮನ್, ಪ್ರಧಾನ ಕೃಷಿ ಅಧಿಕಾರಿ ಪ್ರಭಾರಿ ಕೆ.ಆನಂದ, ಜಿಲ್ಲಾ ಮಣ್ಣು ಸಂರಕ್ಷಣಾಧಿಕಾರಿ ಬಿ.ಎಸ್.ಅನುರಾಧ, ಕಾರಡುಕ ಬ್ಲಾಕ್ ಪಂಚಾಯಿತಿ ಕೆ.ಕೃಷ್ಣನ್, ಕುಟ್ಟಿಕೋಲ್ ಪಂಚಾಯಿತಿ ಮಾಧವನ್ ವೆಳ್ಳಾಲ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ದೀಪಾ, ರಾಜಕೀಯ ಪಕ್ಷದ ಮುಖಂಡರಾದ ಎಂ.ಅನಂತನ್, ಕೆ. ಬಲರಾಮನ್ ನಂಬಿಯಾರ್, ಕೆ.ಕುಂಜಿರಾಮನ್, ಜೋಸೆಫ್ ಮೈಕಲ್, ಇ.ಟಿ.ಮತ್ತಾಯಿ, ಎಂ.ಹಮೀದ್ ಹಾಜಿ, ಮಹೇಶ್ ಗೋಪಾಲನ್, ಸನ್ನಿ ಅರಮನೆ, ಸುರೇಶ್ ಪುತಿಧಾತ್, ರಾಘವನ್ ಕೌಲೇರಿ, ಜೆಟೊ ಜೋಸೆಫ್, ವಿ.ಕೆ.ರಮೇಶ ಮಾತನಾಡಿದರು. ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಯೋಜನೆ ಮತ್ತು ಅಭಿವೃದ್ಧಿ ಡಿ.ಜಯಪ್ರಸಾದ್ ಸ್ವಾಗತಿಸಿ, ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ಪಿ.ಬಿಜು ವಂದಿಸಿದರು.