ಉಡುಪಿ, ಮಾ 22(SM): ಇಲ್ಲಿನ ಉದ್ಯಮಿಯೊಬ್ಬರಿಗೆ ಹಫ್ತಾ ಹಣಕ್ಕೆ ಬೇಡಿಕೆ ಇರಿಸಿದ್ದ ಬನ್ನಂಜೆ ರಾಜನ ಐವರು ಸಹಚರರನ್ನು ಬಂಧಿಸುವಲ್ಲಿ ಉಡುಪಿ ಡಿಸಿಐಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದ ಶಶಿ ಪೂಜಾರಿ, ರವಿಚಂದ್ರ ಪೂಜಾರಿ, ಮಂಗಳೂರಿನ ಉಳಾಯಿಬೆಟ್ಟಿವಿನ ಧನರಾಜ್ ಪೂಜಾರಿ, ಬ್ರಹ್ಮಾವರದ ಧನರಾಜ್ ಸಾಲ್ಯಾನ್ ಮತ್ತು ಉಡುಪಿಯ ಉಲ್ಲಾಸ್ ಶೆಣೈ ಬಂಧಿತ ಆರೋಪಿಗಳು. ಬೆಂಗಳೂರಿನ ಬ್ರಿಗೆಡ್ ಅಡ್ಡ ರಸ್ತೆಯಲ್ಲಿರುವ ಬಾರೊಂದರ ಪಕ್ಕದಲ್ಲಿದ್ದ ಆರೋಪಿಗಳನ್ನು ಡಿಸಿಐಬಿ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದೆ.
ಬಂಧಿತ ಆರೋಪಿಗಳು ಬನ್ನಂಜೆ ರಾಜನ ಸಲಹೆಯಂತೆ ಉದ್ಯಮಿಗಳಿಗೆ ಬೆದರಿಕೆಯೊಡ್ಡಿ ಹಫ್ತಾ ಹಣಕ್ಕಾಗಿ ಬೇಡಿಕೆ ಮಾಡುತ್ತಿದ್ದರು. ಇವರ ವಿರುದ್ಧ ಮಂಗಳೂರು ಹಾಗೂ ಉಡುಪಿಯ ವಿವಿಧ ಠಾಣೆಗಳಲ್ಲಿ ಕೇಸು ದಾಖಲಾಗಿತ್ತು.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಭೂಗತ ಪಾತಕಿ ಬನ್ನಂಜೆ ರಾಜನನ್ನು ವರ್ಷಗಳ ಹಿಂದೆಯೇ ಬಂಧಿಸಲಾಗಿದ್ದು, ಸದ್ಯ ಬಳ್ಳಾರಿಯ ಹಿಂಡಾಲಗ ಜೈಲಿನಲ್ಲಿರಿಸಲಾಗಿದೆ.