ಮಂಗಳೂರು, ಏ.03 (DaijiworldNews/SM): ಕಳೆದ ಆರೂವರೆ ವರ್ಷಗಳಲ್ಲಿ ರಾಜ್ಯ ಮೀನುಗಾರಿಕಾ ಇಲಾಖೆ ಅರ್ಹ ಮೀನುಗಾರರಿಗೆ ಸುಮಾರು ಹತ್ತು ಸಾವಿರ ಮನೆಗಳನ್ನು ನಿರ್ಮಿಸಿದೆ ರಾಜ್ಯ ಮೀನುಗಾರಿಕಾ
ಸಜಿ ಚೆರಿಯನ್ ಹೇಳಿದರು.
ಸೋಮವಾರ ಕುಂಬಳೆಯಲ್ಲಿ ಮೀನುಗಾರರ ಪುನರ್ವಸತಿ ಯೋಜನೆಯ ವಸತಿ ಸಮುಚ್ಚಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಸರಗೋಡು ಜಿಲ್ಲೆಯಲ್ಲಿ ಕರಾವಳಿ ಭಾಗದಲ್ಲಿ ಈಗಾಗಲೇ ಹತ್ತು ಕೋಟಿಗೂ ಹೆಚ್ಚು ರಸ್ತೆಗಳಿಗೆ ವೆಚ್ಚ ಮಾಡಲಾಗಿದ್ದು, ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಸಚಿವರು ಹೇಳಿದರು.
ಕೇರಳ ಕರಾವಳಿಯ ತೀರದಿಂದ 50 ಮೀಟರ್ ಒಳಗೆ ವಾಸಿಸುವ ಮತ್ತು ತೀವ್ರ ಸಮುದ್ರ ದಾಳಿಯನ್ನು ಎದುರಿಸುತ್ತಿರುವ ಸುಮಾರು 18,000 ಮೀನುಗಾರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರವು ಪ್ರಾರಂಭಿಸಿದ ಮತ್ತು ಮೀನುಗಾರಿಕೆ ಇಲಾಖೆಯಿಂದ ಜಾರಿಗೊಳಿಸಲಾದ ಪ್ರಮುಖ ಯೋಜನೆಯಾಗಿದೆ ಎಂದು ಸಚಿವರು ಹೇಳಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿ ತ್ತಾನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಅಧ್ಯಕ್ಷ ಅಶ್ರಫ್ ಕಾರ್ಲ, ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲಾ ಸಿದ್ದೀಕ್, ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಕುಂಬಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಬೂರ, ಕುಂಬಳೆ
ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. .ಎ.ರಹ್ಮಾನ್ ಆರಿಕ್ಕಾಡಿ , ಕುಂಪಲ ಗ್ರಾಮ ಪಂಚಾಯತ್ ಸದಸ್ಯೆ ಸುಲೋಚನಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಮಾತನಾಡಿದರು. ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಸ್ವಾಗತಿಸಿ, ಹಾರ್ಬರ್ ಇಂಜಿನಿಯರಿಂಗ್ ವಿಭಾಗದ ಮುಖ್ಯ ಇಂಜಿನಿಯರ್ ಜೋಮೋನ್ ಕೆ ಜಾರ್ಜ್ ವಂದಿಸಿದರು. ಸಂತೋಷ್ ಕುಮಾರ್ ವರದಿ ಮಂಡಿಸಿದರು