ಮಂಗಳೂರು, ಏ.03 (DaijiworldNews/SM): ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಡಳಿತದಿಂದ ಇ ಫೋಕಸ್ ಮ್ಯಾಗಜೀನ್ ಆರಂಭಿಸಲಾಗಿದ್ದು ಇದರಲ್ಲಿ ಚುನಾವಣೆ ಎಲ್ಲಾ ಮಾಹಿತಿ ಇದರಲ್ಲಿ ಹಾಕಲಾಗುತ್ತದೆ ಎಂದು ಜಿಲ್ಲಾ ಸಿ ಇ ಒ ಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಮತದಾನದ ವಿದಾನಸಭಾ ಕ್ಷೇತ್ರ ಗುರುತು ಮಾಡಲಾಗಿದೆ. ಇದರಲ್ಲಿ ಮಂಗಳೂರು ದಕ್ಷಿಣದಲ್ಲಿ ೬೭% ಮತದಾನ ಆಗುತ್ತೆ. ಈ ಹಿನ್ನೆಲೆ ಈ ಕ್ಷೇತ್ರದತ್ತ ಇಲಾಖೆ ಹೆಚ್ಚಿನ ಆದ್ಯತೆ ನೀಡಿದೆ. ಹೆಚ್ಚಿನ ಪ್ರಮಾಣದ ಮತದಾನ ಆಗಲು ಮತದಾನದ ಮಹತ್ವದ ಮಾಹಿತಿ ಹಂಚಿಕೊಳ್ಳಲಾಗಿದೆ.
ಮಂಗಳೂರು ದಕ್ಷಿಣದಲ್ಲಿ ಇಲಾಖೆಯಿಂದ ಅಪಾರ್ಟ್ಮೆಂಟ್ ಅಭಿಯಾನ ಆರಂಭಿಸಲಾಗಿದೆ. ಪ್ರತೀ ಅಪಾರ್ಟ್ಮೆಂಟ್ ಗಳಿಗೆ ತಂಡ ಭೇಟಿ ನೀಡಲಿದ್ದು ಮತದಾನದ ಜಾಗೃತಿ ಮತ್ತು ಇಲಾಖೆಯಿಂದ ಮತದಾನ ಮಾಡುವಂತೆ ಪತ್ರ ನೀಡಲಾಗುತ್ತದೆ. ಪ್ರತೀ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪತ್ರ ಅಭಿಯಾನ ನಡೆಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಪೋಸ್ಟ್ ಕಾರ್ಡ್ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಂಗಳೂರಿನಲ್ಲಿ ದ.ಕ ಜಿಲ್ಲಾ ಪಂಚಾಯತ್ ಸಿಇಒ ಡಾ. ಕುಮಾರ್ ಹೇಳಿದ್ದಾರೆ.