ಉಡುಪಿ,ಮಾ22(AZM):ಅಭಿವೃದ್ಧಿ ವಿಚಾರದಲ್ಲಿ ಓಟ್ ಕೇಳುವಂತಹ ನೈತಿಕತೆ ರಾಜ್ಯ ಸರಕಾರಕ್ಕಿಲ್ಲ.ಅದಕ್ಕಾಗಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅಭಿವೃದ್ಧಿಯಲ್ಲಿ ಗೆಲ್ಲಲಾಗದಂತ ಕಾಂಗ್ರೆಸ್, ಜೆಡಿಎಸ್ ಸೀಡಿ ರಾಜಕಾರಣದ ಮೂಲಕ ಷಡ್ಯಂತ್ರ್ಯ ರೂಪಿಸುತ್ತಿದ್ದಾರೆ. ಇದೆಲ್ಲವೂ ಸುಳ್ಳು, ನಕಲಿ, ರಾಜ್ಯದ ಜನ ಯಾವುದೇ ಕಾರಣಕ್ಕೆ ತಲೆಕೆಡಿಸಿಕೊಳ್ಳಬಾರದು ಎಂದು ಹೇಳಿದರು.
ಗೋ ಬ್ಯಾಕ್ ಶೋಭಕ್ಕಾ...ಫೇಸ್ ಬುಕ್ ಅಭಿಯಾನದ ಕುರಿತು ಪ್ರತಿಕ್ರಿಯೆ ನೀಡಿದ ಅವರು,ಇದು ಕಾಂಗ್ರೆಸ್ ನ ಹತಾಷೆಯ ಸಂಕೇತವಾಗಿದ್ದು,ಗೋ ಬ್ಯಾಕ್ ಅಭಿಯಾನ ನಡೆಸೋರು ನಮ್ಮ ಕಾರ್ಯಕರ್ತರಲ್ಲ ಎಂದು ತಿಳಿಸಿದರು.