ಮಂಗಳೂರು, ಏ 01 (DaijiworldNews/HR): ಮಂಗಳೂರು ಪೊಲೀಸರು ಕರ್ಕಶ ಹಾರನ್ ಮತ್ತು ಟಿಂಟೆಡ್ ಗ್ಲಾಸ್ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದು, ಶುಕ್ರವಾರ ಒಂದೇ ದಿನ 120 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬಸ್ಗಳು ಸೇರಿದಂತೆ 106 ವಾಹನಗಳಿಂದ ಕರ್ಕಶ ಹಾರನ್ ತೆಗೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದದು, 14 ವಾಹನಗಳಿಂದ ಟಿಂಟೆಡ್ ಗ್ಲಾಸ್ಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇನ್ನು ಕರ್ಕಶ ಹಾರನ್ ಅನೇಕ ಬಾರಿ ದ್ವಿಚಕ್ರ, ಆಟೋಗಳಲ್ಲಿ ಪ್ರಯಾಣಿಸುವವರನ್ನು, ರಸ್ತೆ ಬದಿ ನಿಂತಿರುವ ಮತ್ತು ನಡೆದುಕೊಂಡು ಹೋಗುವವರನ್ನು ಗಲಿಬಿಲಿಗೊಳಿಸುತ್ತಿದೆ.
ಹಾರ್ನ್ ನಿಷೇಧಿತ ಪ್ರದೇಶವೆಂದು ಗುರುತಿಸಲಾಗುವ ಶಾಲಾ ಕಾಲೇಜು, ಆಸ್ಪತ್ರೆ ಮೊದಲಾದ ಪರಿಸರ ದಲ್ಲಿಯೂ ಹಾರ್ನ್ ಹಾವಳಿ ಹೆಚ್ಚಾಗುತ್ತಿದ್ದು, ರಸ್ತೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸದ್ದು ಮಾಡುವ ಹಾರನ್ಗಳಿಂದ ಸಾರ್ವ ಜನಿಕರು ಬೇಸತ್ತು ಹೋಗಿದ್ದಾರೆ.
ಹಾಗಾಗಿ ಮಂಗಳೂರು ಪೊಲೀಸರು ಕರ್ಕಶ ಹಾರನ್ ಮತ್ತು ಟಿಂಟೆಡ್ ಗ್ಲಾಸ್ ವಿರುದ್ಧ ಕಾರ್ಯಾಚರಣೆ ಮುಂದುವರೆಸಿ ಈಗಾಗಲೇ 120 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.