ಮಂಗಳೂರು, ಮಾ 30 (DaijiworldNews/DB): ಯುವಕನೊಬ್ಬ ಅಪಾರ್ಟ್ಮೆಂಟ್ನ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಸಾವು ಆತ್ಮಹತ್ಯೆ ಎಂಬುದಾಗಿ ಶಂಕೆ ವ್ಯಕ್ತವಾಗಿದೆ.
ಮೊಬೈಲ್ ಕೇರ್ ಮಳಿಗೆಯ ಮಾಲಕ, ಉದ್ಯಮಿ ಅಬ್ದುಲ್ ಸಲೀಂ ಅವರ ಪುತ್ರ ಮಹಮ್ಮದ್ ಶಾಮಲ್ (21) ಮೃತ ಯುವಕ. ಗುರುವಾರ ಮುಂಜಾನೆ 4.45ರ ಸುಮಾರಿಗೆ ಕೆಪಿಟಿ ವೃತ್ತದ ಬಳಿಯಲ್ಲಿರುವ ಅಪಾರ್ಟ್ಮೆಂಟ್ನ ತನ್ನ ಮನೆಯ14ನೇ ಮಹಡಿಯಿಂದ ಈತ ಬಿದ್ದಿದ್ದಾನೆ. ಯುವಕ ಕೆಲವು ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದ ಕಿರಿ ಕಿರಿ ಅನುಭವಿಸುತ್ತಿದ್ದ. ಚಿಕಿತ್ಸೆಯಿಂದಲೂ ಸಮಸ್ಯೆ ನಿವಾರಣೆಯಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶಾಮಲ್ ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821