ಬಂಟ್ವಾಳ, ಮಾ 30 (DaijiworldNews/HR): ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತಮ್ಮ ಕಾರಿನ ನಾಮಫಲಕವನ್ನು ತೆರವುಗೊಳಿಸಿ ಆಯೋಗದ ನಿಯಮ ಪಾಲಿಸಿದ್ದಾರೆ.
ಬಂಟ್ವಾಳದ ಸ್ನೇಹಿತರ ಮನೆಯಲ್ಲಿರುವಂತೆಯೇ ಚುನಾವಣಾ ದಿನಾಂಕ ಘೋಷಣೆ, ನೀತಿ ಸಂಹಿತೆ ಜಾರಿಯ ಸುದ್ದಿ ತಿಳಿಯುತ್ತಿದ್ದಾಂತೆಯೇ ಚಾಲಕ ಮಂಜು ಅವರ ಮೂಲಕ ತಮ್ಮ ವಾಹನದಲ್ಲಿ ಅಳವಡಿಸಿದ್ದ ಶಾಸಕರ ನಾಮಫಲಕವನ್ನು ತೆರವುಗೊಳಿಸಿದರು. ಆಯೋಗ ತಿಳಿಸಿದಂತೆ ಮಾರ್ಚ್ 29ರಿಂದಲೇ ನೀತಿ ಸಂಹಿತೆ ಜಾರಿಗೊಂಡಿದ್ದು, ಮೇ 10 ಕ್ಕೆ ಚುನಾವಣೆ ನಡೆದು, 13 ಕ್ಕೆ ಫಲಿತಾಂಶ ಹೊರ ಬೀಳಲಿದೆ.
ಇನ್ನು ಶಾಸಕರು, ಸಚಿವರು ಅಲ್ಲಿಯವರೆಗೂ ಯಾವುದೇ ಸರ್ಕಾರಿ ಸೌಕರ್ಯ ಬಳಸುವಂತಿಲ್ಲ ಹಾಗೂ ಹೊಸ ಘೋಷಣೆಗಳನ್ನು ಘೋಷಿಸುವಂತಿಲ್ಲ. ನೀತಿ ಸಂಹಿತೆಗೆ ಪೂರಕವಾಗಿ ಬಂಟ್ವಾಳ ಶಾಸಕರು ತಮ್ಮ ಕಾರಿನ ನಾಮಫಲಕ ತೆರವು ಗೊಳಿಸಿದ್ದಾರೆ.